ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗಣನಾಯಕ... ನೀನೇ ಸಂರಕ್ಷಕ; ರಕ್ತವರ್ಣ ಗಜಾನನ... ನಿನಗೆ ಕೋಟಿ ನಮನ

ಹುಬ್ಬಳ್ಳಿ: ಅದೊಂದು ಪುಟ್ಟ ಗ್ರಾಮ. ಈ ಗ್ರಾಮದಲ್ಲಿ ವರುಷಕ್ಕೊಮ್ಮೆ ಪ್ರತಿಷ್ಠಾಪನೆ ಮಾಡುವ ಗಣಪತಿ ನೋಡಲು ನಾಡಿನ ಮೂಲೆ ಮೂಲೆಗಳಿಂದ ಜನ ಬರ್ತಾರೆ. ಮಕ್ಕಳಿಲ್ಲದವರು, ಮದುವೆಯಾಗದವರು, ನೌಕರಿ ಇಲ್ಲದವರು, ವಿದ್ಯೆ-ಬುದ್ಧಿ ಬೇಕಾದವರು ಹೀಗೆ ಹತ್ತಾರು ಸಮಸ್ಯೆಗಳನ್ನು ಹೊತ್ತುಕೊಂಡು ಬರುವ ಭಕ್ತರಿಗೆ ಇಲ್ಲಿನ ಗಣಪತಿ ಸಂಕಷ್ಟ ನಿವಾರಣೆ ಮಾಡಿ, ಅನುಗ್ರಹಿಸುತ್ತಾನೆ ಅನ್ನೋ ಪ್ರತೀತಿ ಇದೆ.

3 ದಿನಗಳ ವರೆಗೆ ರಾತ್ರಿ- ಹಗಲು ಎನ್ನದೇ ಐದಾರು ಕಿ.ಮೀ. ಉದ್ದದ ಸಾಲಿನಲ್ಲಿ ನಿಂತು ವಿಘ್ನ ನಿವಾರಕನ ದರ್ಶನ ಪಡೀತಾರೆ. ಯಾವುದು ಆ ಗ್ರಾಮ? ಅಲ್ಲಿನ ಗಣಪತಿಯ ವಿಶೇಷ ಏನು ಅಂತೀರಾ? ಇದೇ ಇವತ್ತಿನ ವಿಶೇಷ ಛಬ್ಬಿ ಗಣಪನ ಸಂಭ್ರಮ...

ಸ್ವಾತಂತ್ರ್ಯ ಹೋರಾಟ ಸಂದರ್ಭ ಸಾರ್ವಜನಿಕರನ್ನು ಒಂದುಗೂಡಿಸುವ ಉದ್ದೇಶದಿಂದ ಬಾಲ ಗಂಗಾಧರನಾಥ ತಿಲಕರು ಸಾರ್ವಜನಿಕ ಗಣೇಶ ಪ್ರತಿಷ್ಠೆ ಹುಟ್ಟು ಹಾಕಿದರು. ಅಂದು ಆರಂಭಗೊಂಡ ಈ ಆಚರಣೆ ನಂತರ ಹಬ್ಬವಾಗಿ ರೂಪುಗೊಂಡಿತು. ವಿದೇಶದಲ್ಲೂ ಗಣೇಶೋತ್ಸವ ಆಚರಣೆ ನಮ್ಮ ಧಾರ್ಮಿಕತೆಯ ಹಿರಿಮೆಯೇ ಸರಿ.

ಇಂದು ಗಣಪತಿ ಹಬ್ಬ ದೇಶಾದ್ಯಂತ ವಿಶೇಷವಾಗಿ ಆಚರಿಸಲ್ಪಡುತ್ತಿದೆ. ಇದಕ್ಕೆ ರಾಜ್ಯದಲ್ಲಿಯೇ ಹೆಚ್ಚು ಹೆಸರಾಗಿರೋದು ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮ. ಬ್ರಿಟಿಷರ ವಿರುದ್ಧ ಹೋರಾಡಲು ಆರಂಭಗೊಂಡ ಗಣೇಶೋತ್ಸವ... ಆದರೆ, ಅದಕ್ಕೂ ಮುಂಚೆಯೇ ಅಂದರೆ 75 ವರುಷಗಳ ಹಿಂದೆಯೇ ಛಬ್ಬಿ ಗ್ರಾಮದಲ್ಲಿ ಈ ಆಚರಣೆ ಆರಂಭವಾಗಿದ್ದು ವಿಶೇಷವೇ ಹೌದು!. ಅದ್ರಲ್ಲೂ ಛಬ್ಬಿ ಕೆಂಪು ಗಣಪನನ್ನು ನೋಡುವುದೇ ಒಂದು ಭಾಗ್ಯ. ಆತನ ದರ್ಶನ ಮಾತ್ರದಿಂದಲೇ ಇಷ್ಟಾರ್ಥ ಸಿದ್ಧಿಸುತ್ತೆ ಎಂಬ ನಂಬಿಕೆ ಭಕ್ತರಲ್ಲಿ

ಇಂದಿಗೂ ಇದೆ‌.

Edited By : Somashekar
Kshetra Samachara

Kshetra Samachara

01/09/2022 09:29 pm

Cinque Terre

82.82 K

Cinque Terre

1

ಸಂಬಂಧಿತ ಸುದ್ದಿ