ಅಳ್ನಾವರ: ಅಳ್ನಾವರ ಪಟ್ಟಣದಲ್ಲಿ ಸುಮಾರು 35- 40 ವರ್ಷಗಳಿಂದ ಸಣ್ಣ ಹನುಮಾನ್ ದೇಗುಲವಿತ್ತು. ಸ್ಥಳೀಯರು ದೊಡ್ಡದಾದ ದೇವಸ್ಥಾನ ನಿರ್ಮಿಸಬೇಕೆಂದು ಸಂಕಲ್ಪಿಸಿದ್ದರು. ಅವರೆಲ್ಲರ ಕನಸು ಇದೀಗ ನನಸಾಗಿದೆ.
ಹೌದು, ಪಟ್ಟಣದ ನೆಹರೂ ನಗರದ ಹೃದಯ ಭಾಗದಲ್ಲಿ ಸುಂದರವಾದ ಭಜರಂಗಿ ದೇಗುಲ ಸಿದ್ಧವಾಗಿದೆ.
50 ಲಕ್ಷ ರೂ. ವೆಚ್ಚದಲ್ಲಿ ಬೃಹತ್ ಮಂದಿರ ನಿರ್ಮಾಣವಾಗಿದ್ದು,100ಕ್ಕಿಂತಲೂ ಅಧಿಕ ಕಾರ್ಮಿಕರು ನಿರ್ಮಿಸಿದ್ದಾರೆ. ಅಲ್ಲದೆ, ಅವರೂ ದೇಣಿಗೆ ನೀಡಿದ್ದಾರೆ.
40 ವರ್ಷಗಳ ಹಿಂದೆ ಚಿಕ್ಕ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾ ಬರಲಾಗುತ್ತಿತ್ತು. ಇದೀಗ ಎಲ್ಲರ ಕಣ್ಮನ ಸೆಳೆಯುವಂತಹ ದೇವಸ್ಥಾನ ತಲೆ ಎತ್ತಿದೆ. ಏ. 15ರಿಂದ 17 ರ ತನಕ ಉದ್ಘಾಟನೆ ಕಾರ್ಯಕ್ರಮಗಳು ಜರುಗಲಿವೆ.
ಶನಿವಾರ ಹನುಮ ಜಯಂತಿ ಇದೆ. ಈ ಶುಭ ಸಂದರ್ಭದಲ್ಲಿ ಪ್ರಾಣ ಪ್ರತಿಷ್ಠೆ ಸಹ ಜರುಗಲಿದೆ. ಕಾರ್ಯಕ್ರಮಕ್ಕೆ ಮಂಜುನಾಥ ಭಾರತೀ ಸ್ವಾಮಿಗಳು ಗೋಸಾಯಿ ಮಠ ಗವೀಪುರಂ ಬೆಂಗಳೂರು ಹಾಗೂ ಪ್ರಭು ನೀಲಕಂಠ ಮಹಾ ಸ್ವಾಮಿಗಳು ಮೂರು ಸಾವಿರ ಮಠ ಬೈಲಹೊಂಗಲ ಇವರು ಸಾನಿಧ್ಯ ವಹಿಸಲಿದ್ದಾರೆ.
3 ದಿನಗಳ ಕಾರ್ಯಕ್ರಮದಲ್ಲಿ ವಿಶೇಷ ಪೂಜೆ, ಕುಂಭಮೇಳ, ಹೋಮ-ಹವನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
- ಮಹಾಂತೇಶ ಪಠಾಣಿ, 'ಪಬ್ಲಿಕ್ ನೆಕ್ಸ್ಟ್' ಅಳ್ನಾವರ
Kshetra Samachara
14/04/2022 10:26 pm