ಕುಂದಗೋಳ: ಶ್ರೀ ಜಗದ್ಗುರು ರೇಣುಕಾಚಾರ್ಯ ಯುಗಮಾನೋತ್ಸವ ನಿಮಿತ್ತ ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದಲ್ಲಿ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಜನಜಾಗೃತಿ ಸಭೆಯನ್ನು ಭಕ್ತಿ ಪ್ರಧಾನವಾಗಿ ಆಚರಿಸಲಾಯಿತು.
ಹರ ಗುರು ಚರಮೂರ್ತಿಗಳ ನೇತೃತ್ವದಲ್ಲಿ ನಾಡಿನ ವಿವಿಧ ಮೂಲೆಗಳಿಂದ ಆಗಮಿಸುವ ಮಠಾಧೀಶರ ದಿವ್ಯ ಸಾನಿದ್ಯದಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಉತ್ಸವ ಸುಮಂಗಲೆಯರ ಪೂರ್ಣ ಕುಂಭ ಕೊಡಗಳ ಮೆರವಣಿಗೆ ಸಕಲ ವಾದ್ಯ ವೈಭವಗಳೊಂದಿಗೆ ಜರುಗಿತು.
ಪಶುಪತಿಹಾಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಮೆರವಣಿಗೆ ಸಂಚರಿಸಿ, ಜಗದ್ಗುರು ರೇಣುಕಾಚಾರ್ಯ ಮಂದಿರದವರೆಗೆ ಅದ್ದೂರಿಯಾಗಿ ಸಂಚರಿಸಿತು.
ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಡೊಳ್ಳು ಕುಣಿತ, ಗೊಂಬೆ ಕುಣಿತ, ಮಹಿಳೆಯರ ಭಕ್ತಿ ಗೀತೆಗಳು, ಗೋರವಯ್ಯ ವೇಷಧಾರಿಗಳಿಂದ ವಿವಿಧ ಪವಾಡಗಳು ನಡೆದು ಜನರ ಕಣ್ಮನ ಸೆಳೆದವು.
ಒಟ್ಟಾರೆ ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ತತ್ವದಲಿ ಸರ್ವಧರ್ಮಗಳು ಸೇರಿ ಅಡ್ಡಪಲ್ಲಕ್ಕಿ ಮಹೋತ್ಸವ ಅತಿ ವಿಶೇಷ ಹಾಗೂ ವೈಶಿಷ್ಟವಾಗಿ ಆಚರಿಸಿದರು.
Kshetra Samachara
11/04/2022 08:36 pm