ಕುಂದಗೋಳ: ತಾಲೂಕಿನ ಶಿರೂರು ಗ್ರಾಮದಲ್ಲಿ ನಡೆಯುವ ಅಕ್ಕಿ ಬೇಳೆ ವೈಶಿಷ್ಟ್ಯ ಪೂರ್ಣ ಪೂಜೆಯೂ ಭಕ್ತಿ ಆರಾಧನೆಯ ಪ್ರತೀಕ ಮತ್ತು ಪವಾಡ ಎಂದೇ ಎಲ್ಲೆಡೆ ಹೆಸರುವಾಸಿ.
ಸರಿ ಸುಮಾರು 300 ವರ್ಷಗಳ ಇತಿಹಾಸದ ಅಕ್ಕಿ ಬೇಳೆ ಪೂಜೆಯು ಭಾರತ ಹುಣ್ಣಿಮೆ ಒಂದು ದಿನ ಮೊದಲು ಆರಂಭವಾಗಿ ಹೋಳಿ ಹುಣ್ಣಿಮೆಗೂ ಒಂದು ದಿನ ಮೊದಲು ಮುಕ್ತಾಯವಾಗುತ್ತದೆ.
ಆಕ್ಕಿ ಬೇಳೆ ಪೂಜೆ ಹಿನ್ನೆಲೆ ಮತ್ತು ವಿಶೇಷ ಏನಂದ್ರೆ ! ಆಪಾದನೆಗೆ ಗುರಿಯಾದ ಶಿರೂರಿನ ಶ್ರೀಮಂತರೊಬ್ಬರು ಶ್ರೀಶೈಲಕ್ಕೆ ಪಾದಯಾತ್ರೆ ಬೆಳೆಸಿ ಮುಕ್ತಿ ಹೊಂದಿದಾಗ, ಪ್ರತಿ ಬಾರಿ ಶ್ರೀಶೈಲಕ್ಕೆ ಭೇಟಿ ನೀಡುವ ಬದಲಾಗಿ ಗ್ರಾಮದಲ್ಲೇ ಪ್ರತಿ ವರ್ಷ ಅಕ್ಕಿ ಬೇಳೆ ಪೂಜೆಯ ಮೂಲಕ ಶ್ರೀ ಶೈಲ ಮಲ್ಲಿಕಾರ್ಜುನನ ಆರಾಧನೆ ಆರಂಭಿಸುತ್ತಾರೆ.
ಈ ಪೂಜೆ ವಿಶೇಷತೆ ಅಂದ್ರೆ ಒಂದು ಚಕ್ಕಡಿ ಚಕ್ರದ ಆಕಾರದ ಮೇಲೆ 12 ಇಂಚು ಎತ್ತರವಾಗಿ ನೆನೆಸಿದ ಅಕ್ಕಿ ಹಾಗೂ ಬೇಳೆಯನ್ನು ದಾರದ ಮೂಲಕ ಲಂಬಾಕಾರವಾಗಿ ಸುತ್ತಿ ಅದಕ್ಕೆ ಸುತ್ತ ವೀಳ್ಯದೆಲೆಯ ಪೂಜೆ ಕಟ್ಟಿ, ಭೂಮಿ ಆಕಾಶಕ್ಕೆ ಲಂಬವಾಗಿ ನಿಲ್ಲಿಸುತ್ತಾರೆ. ಅಕ್ಕಿ ಬೇಳೆ ತುಂಬಿದ ಚಕ್ರದ ಕೆಳಗೆ ಶ್ರೀಶೈಲ ಮಲ್ಲಿಕಾರ್ಜುನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜಿಸುತ್ತಾರೆ.
ಕುಂದಗೋಳ ತಾಲೂಕ ಸೇರಿ ರಾಜ್ಯಾದ್ಯಂತ ಭಕ್ತರು ಅಕ್ಕಿ ಬೇಳೆ ಪೂಜೆ ದರ್ಶನ ಪಡೆದು ತಮ್ಮ ಬೇಡಿಕೆ ಸಮರ್ಪಿಸಿ, ಬೇಡಿಕೆ ಈಡೇರಿದ ಬಳಿಕ ತಾವು ಸಹ ಸೇವೆಯಾಗಿ ಈ ಪೂಜೆ ಕಟ್ಟಿಸುತ್ತಾರೆ. ಈ ಹಿಂದಿನಿಂದ ಶಿರೂರು ಗ್ರಾಮದಲ್ಲಿ ಪಾರವ್ವಗೌಡಶಾನಿ ಕಲ್ಲನಗೌಡರ ಮನೆತನದವರು ಈ ಪೂಜೆ ನಡೆಸಿಕೊಂಡು ಬಂದಿದ್ದು, ಪರ್ವತೇಶ್ವರ ದೇವಸ್ಥಾನದಲ್ಲಿ ಈ ವರ್ಷ ಪೂಜೆ ನೆರವೇರಿದೆ.
Kshetra Samachara
16/03/2022 07:39 pm