ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ ಮಾರ್ದನಿಸಿದ ಜೈ ಶ್ರೀರಾಮ ಘೋಷಣೆ

ಧಾರವಾಡ: ಧಾರವಾಡದ ಪ್ರಮುಖ ರಸ್ತೆ ಹಾಗೂ ವೃತ್ತದಲ್ಲಿ ಇಂದು ಜೈ ಶ್ರೀರಾಮ ಘೋಷಣೆ ಮೊಳಗಿತು. ಇದಕ್ಕೆ ಕಾರಣ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ.

ರಾಮ ಮಂದಿರ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಈಗಾಗಲೇ ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಅದರ ಅಂಗವಾಗಿ ಆರ್ ಎಸ್ಎಸ್ ವತಿಯಿಂದ ಭವ್ಯ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿತ್ತು.

ಈ ಶೋಭಾಯಾತ್ರೆಗೆ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ ನೀಡಿದರು. ಶೋಭಾಯಾತ್ರೆಯು ಕೊಪ್ಪದಕೇರಿ ಶಿವಾಲಯದಿಂದ ಪ್ರಾರಂಭವಾಗಿ ಸೈದಾಪುರ, ಮಾಳಾಪುರ, ಕಮಲಾಪುರ ಮರಾಠಾ ಕಾಲೊನಿ, ಶಿವಾಜಿ ವೃತ್ತ, ಮದಿಹಾಳ, ರಾಜನಗರ ಮೋರೆ ಪ್ಲಾಟ ಮುಖಾಂತರ ಹಾದು ಮುರುಘಾಮಠಕ್ಕೆ ಬಂದು ಮುಕ್ತಾಯವಾಯಿತು.

ಶಾಸಕ ಅಮೃತ‌ ದೇಸಾಯಿ, ಮಾಜಿ ಶಾಸಕಿ ಸೀಮಾ ಮಸೂತಿ, ಈರೇಶ ಅಂಚಟಗೇರಿ, ಡಾ.ಎಸ್ ರಾಮನಗೌಡರ, ತವನಪ್ಪ ಅಷ್ಟಗಿ ಸೇರಿದಂತೆ ಅನೇಕರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Edited By : Manjunath H D
Kshetra Samachara

Kshetra Samachara

17/01/2021 01:37 pm

Cinque Terre

38.65 K

Cinque Terre

7

ಸಂಬಂಧಿತ ಸುದ್ದಿ