ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ನಿತ್ಯ ರಾತ್ರಿ ಈ ಸುಲ್ತಾನಪುರದಲ್ಲಿ ಮೊಳಗಿವೆ ಕೋಲಾಟ ಶೋಭಾನೆ ಪದ

ಕುಂದಗೋಳ : ಕಾಲ ಎಷ್ಟೇ ಬದಲಾಗಲಿ, ವಿದ್ಯಮಾನಗಳು ಎಷ್ಟೇ ಅಭಿವೃದ್ಧಿಯಾಗಲಿ, ಈ ಹಳ್ಳಿ ಪರಿಸರದಲ್ಲಿನ ಹೊಂದಾಣಿಕೆಯ ಸಂತೋಷ ಎಲ್ಲಿ ಸಿಗುವುದಿಲ್ಲ ನೋಡಿ. ಈ ಕಾರಣದಿಂದಲೇ ಹಳ್ಳಿಗಳೆಂದರೇ ಅವೆಲ್ಲಾ ಸಂಸ್ಕೃತಿಗಳ ಬೀಡು ಎಂಬ ಮಾತು ಇಂದಿಗೂ ಜನಜನಿತವಾಗಿದೆ.

ಈ ಮಾತಿಗೆ ಸಾಕ್ಷಿ ಎಂಬಂತೆ ಇಲ್ಲೊಂದು ಊರಲ್ಲಿ ರಾತ್ರಿಯಾದರೇ ಸಾಕು ಮಹಿಳೆಯರ ಕೋಲಾಟದ ಸದ್ದು, ಶೋಭಾನೆ ಪದಗಳ ದಾಟಿ ಇಡೀ ಊರಲ್ಲಿ ನಿತ್ಯ ರಾತ್ರಿಯಾದರೇ ಸಾಕು ಹಬ್ಬದ ವಾತಾವರಣ ಸೃಷ್ಟಿಸಿ ನೆರೆ ಹೊರೆಯವರ ಬಾಂಧ್ಯತ್ವವನ್ನು ಮೆರೆಸ ಹತ್ತಿವೆ.

ಸೀಗೆ ಹುಣ್ಣಿಮೆಯಿಂದ ಹಿಡಿದು ಗೌರಿ ಹುಣ್ಣಿಮೆಯವರೆಗೆ ಈ ಸುಲ್ತಾನಪುರ ಗ್ರಾಮದ ಮಹಿಳೆಯರು ಪ್ರತಿ ವರ್ಷ ನಿತ್ಯ ರಾತ್ರಿ ಕೋಲಾಟ ಆಡುತ್ತಾ, ಶೋಭಾನ ಪದ ಹಾಡುತ್ತಾ, ಆನಂದ ಪಡುತ್ತಾರೆ. ಆ ಮಹಿಳೆಯರ ಮಾತನ್ನೋಮ್ಮೆ ನೀವು ಕೇಳಿ.

ಈ ಹಳ್ಳಿಗಳಲ್ಲಿನ ಹಬ್ಬಗಳ ವಿಶಿಷ್ಟ ಆಚರಣೆಗಳು ಮರೆಯಾಗುತ್ತಿರುವ ದಿನಗಳಲ್ಲಿ ಈ ಸುಲ್ತಾನಪುರದ ಮಹಿಳೆಯರ ಕಾರ್ಯ ಭಾರತೀಯ ಸಂಸ್ಕೃತಿ ಸಡಗರದ ಪ್ರತೀಕವಾಗಿದ್ದು, ಅವುಗಳನ್ನು ವಯಸ್ಸಿನ ಅಂತರವನ್ನ ಮರೆತು ಇನ್ನು ಉಳಿಸಿ ಬೆಳೆಸುವ ಈ ಮಹಿಳೆಯರಿಗೆ ಒಂದು ಸಲಾಂ ಹೇಳಲೇಬೇಕು.

Edited By : Manjunath H D
Kshetra Samachara

Kshetra Samachara

19/11/2020 07:09 pm

Cinque Terre

27.7 K

Cinque Terre

1

ಸಂಬಂಧಿತ ಸುದ್ದಿ