ಹುಬ್ಬಳ್ಳಿ: ರಾಜ್ಯ ಸರ್ಕಾರ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಂದಾಗಿರುವುದು ಸ್ವಾಗತಾರ್ಹ ಎನ್ನುವ ಮೂಲಕ ಮರಾಠಾ ಪರವಾಗಿ ಬಾಲೆಹೊಸೂರ ಮಠದ ದಿಂಗಾಲೇಶ್ವರ ಬ್ಯಾಟಿಂಗ್ ಮಾಡಿದ್ದಾರೆ.
ಈ ಕುರಿತು ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಅವರು, ರಾಜ್ಯ ಸರ್ಕಾರ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಸ್ಥಾಪನೆ ಸ್ವಾಗತಿಸಿದ ಸ್ವಾಮೀಜಿ ಇದೇ ವೇಳೆ ರಾಜ್ಯದಲ್ಲಿ ಕನ್ನಡ ಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿರುವ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಸ್ವಾಗತಿಸಿ ಮರಾಠಾ ಪರ ಬ್ಯಾಟಿಂಗ್ ಮಾಡಿದ್ದಾರೆ.
ಈಗಾಗಲೇ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸಾಕಷ್ಟು ಕನ್ನಡ ಹೋರಾಟಗಾರರು ಹಾಗೂ ಕನ್ನಡ ಪರ ಹೋರಾಟಗಾರರು ಸಾಕಷ್ಟು ವಿರೋಧ ವ್ಯಕ್ತಪಡಿಸಿ ಎಲ್ಲೆಡೆಯೂ ಪ್ರತಿಭಟನೆ ನಡೆಸುತ್ತ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ.ಆದರೇ ದಿಂಗಾಲೇಶ್ವರ ಸ್ವಾಮೀಜಿ ಅವರು ಮರಾಠಾ ನಿಗಮ ಸ್ಥಾಪನೆ ಸ್ವಾಗತಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದ ಗಡಿಯಲ್ಲಿ ಮರಾಠಾ ಹಾಗೂ ಕನ್ನಡದ ಮುಸುಕಿನ ಗುದ್ದಾಟ ನಡೆಯುತ್ತಿದ್ದರೂ ಕೂಡ ಸ್ವಾಮೀಜಿ ಮರಾಠಾ ನಿಗಮ ಸ್ಥಾಪನೆಗೆ ಸ್ವಾಗತಿಸಿರುವುದು ಕನ್ನಡ ಹೋರಾಟಗಾರರಿಗೆ ಅಸಮಾಧಾನ ಉಂಟು ಮಾಡಿದೆ..
Kshetra Samachara
17/11/2020 02:29 pm