ನವಲಗುಂದ : ಪಟ್ಟಣದ ಚೇತನ ಗ್ರಾಮೀಣ ನಗರಾಭಿವೃದ್ಧಿ ವಿದ್ಯಾಸಂಸ್ಥೆ ಮತ್ತು ಸಂಜೀವಿನಿ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಸಂಯೋಗದಿಂದ ಕರ್ನಾಟಕ ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ನಿರುದ್ಯೋಗಿ ಯುವಕ ಯುವತಿಯರು ಹಾಗೂ ಬಡ ವಿದ್ಯಾರ್ಥಿಗಳಿಗೆ ಉದಯೋನ್ಮುಖ ಚೇತನ ಕರ್ನಾಟಕ ಕಾರ್ಯಕ್ರಮದಡಿಯಲ್ಲಿ 150 ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಬೇಸಿಕ್ ಸ್ಪೋಕನ್ ಇಂಗ್ಲೀಷ್ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ನವಲಗುಂದ ತಾಲೂಕ ಸರಕಾರಿ ನೌಕರ ಸಂಘದ ಅಧ್ಯಕ್ಷರಾದ ಎ ಬಿ ಕೊಪ್ಪದ, ಹೈಸ್ಕೂಲ್ ಶಾಲೆ ಮುಖ್ಯ ಶಿಕ್ಷಕರಾದ ಹುಲ್ಲೂರು, ಪುರಸಭೆ ಸದಸ್ಯರಾದ ಐ ಡಿ ಪ್ರಭುಗೌಡ್ರ, ಸಂಜೀವಿನಿ ಟ್ರಸ್ಟ್ ಅಧ್ಯಕ್ಷರಾದ ಮಲ್ಲಿಕಾರ್ಜುನಗೌಡ ಸಂಗನಗೌಡ್ರ, ಕವಿತಾ ಸಂಗನಗೌಡ, ಶಿಕ್ಷಕಿ ಗೀತಾ ಶಿರಹಟ್ಟಿಮಠ, ನಿರೂಪಣೆ ಅರುಣ ಕುಮಾರ ಮೆಣಸಿನಕಾಯಿ, ಸಿದ್ದು ಪೂಜಾರ ವಂದಿಸಿದರು.
Kshetra Samachara
29/01/2022 11:01 pm