ನವಲಗುಂದ : ತಾಲೂಕಿನ ಜಾವೂರ ಗ್ರಾಮಕ್ಕೆ ಧಾರವಾಡ ಉಸ್ತುವಾರಿ ಸಚಿವರು ಮತ್ತು ಕೈಮಗ್ಗ ಮತ್ತು ಜವಳಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ "ಕೆರೆ ಸಂಜೀವಿನಿ" ಯೋಜನೆಯ ಅಡಿಯಲ್ಲಿ ಗ್ರಾಮದ ಕುಡಿಯುವ ನೀರಿನ ಕೆರೆಯಲ್ಲಿ ಕೈಗೊಂಡಿರುವ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಸ್.ಬಿ.ದಾನಪ್ಪಗೌಡರ, ಎ.ಎಂ ಮನಮಿ, ಶಂಕರಗೌಡ ರಾಯನಗೌಡರ, ಸಿದ್ಧಣ್ಣ ಕಿಟಗೇರಿ ಸೇರಿದಂತೆ ಅನೇಕ ಗಣ್ಯರು ಹಾಗೂ ಗ್ರಾಮದ ಗುರು-ಹಿರಿಯರು ಉಪಸ್ಥಿತರಿದ್ದರು.
Kshetra Samachara
23/01/2022 05:33 pm