ಕಲಘಟಗಿ: ಕಲಘಟಗಿ ಪಟ್ಟಣ ಪಂಚಾಯಿತಿ ಸುಮುದಾಯ ಭವನದಲ್ಲಿ ಆರೋಗ್ಯ ಇಲಾಖೆಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ರಮಕ್ಕೆ ಶಾಸಕ ಸಿ ಎಂ ನಿಂಬಣ್ಣವರ ಚಾಲನೆ ನೀಡಿದರು.ಕೊವೀಡ್ ಮಾಹಾಮಾರಿಯನ್ನು ತಡೆಗಟ್ಟುವಲ್ಲಿ ಆರೋಗ್ಯ ಇಲಾಖೆಯ ಕಾರ್ಯಕರ್ತರ ಪಾತ್ರ ಬಹುಮುಖ್ಯವಾಗಿದ್ದು,ಆದ್ದರಿಂದ ಸರಕಾರ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ಕೆ ಚಾಲನೆ ನೀಡಿದೆ ಇದರಿಂದ ಆರೋಗ್ಯ ಇಲಾಖೆಯ ಸಿಬ್ಬಂದಿ,ಮತ್ತಷ್ಟ ಉತ್ತಮ ರೀತಿಯಲ್ಲಿ ಕೋವಿಡ್ ವಿರುದ್ಧ ಕೆಲಸ ಮಾಡಲು ಅನುಕೂಲವಾಗಲಿದೆ ಎಂದರು.
ತಾಲೂಕಾ ಆರೋಗ್ಯಾಧಿಕಾರಿ ಡಾ.ಬಸವರಾಜ ಬಾಸೂರ,ತಹಶೀಲ್ದಾರ ಯಲ್ಲಪ್ಪ ಗೊಣೆಣ್ಣವರ,ಕಾರ್ಯನಿರ್ವಾಹಕ ಅಧಿಕಾರಿ ಎಸ್ ಸಿ ಮಠಪತಿ,ಡಾ.ಜೆ ಎಂ ಮಧುಸೂಧನ,ಮಾಲತೇಶ ಕುಲಕರ್ಣಿ,ಗಿರಿಜಾದೇವಿ ಉಪಸ್ಥಿತರಿದ್ದರು.
Kshetra Samachara
11/01/2022 12:26 pm