ಹುಬ್ಬಳ್ಳಿ: ಹುಬ್ಬಳ್ಳಿ ಮಹಾತ್ಮಾ ಗಾಂಧಿ ಉದ್ಯಾನದ ಇಂದಿರಾ ಗಾಜಿನ ಮನೆಯ ಗೃಹೋಪಯೋಗಿ ವಸ್ತುಗಳ ಮಾರಾಟ ಹಾಗೂ ಪ್ರದರ್ಶನ ಗೃಹಶೋಭಾ ಮೇ 29ರವರೆಗೂ ನಡೆಯಲಿದೆ. ಗ್ರಾಹಕರ ಬೇಡಿಕೆ ಹಾಗೂ ಪ್ರತಿಕ್ರಿಯೆ ಸಿಕ್ಕಿರುವ ಹಿನ್ನೆಲೆ ಪ್ರದರ್ಶನದ ಅವಧಿ ವಿಸ್ತರಿಸಲಾಗಿದೆ.
ಅನೇಕ ದಿನಬಳಕೆಯ ವಸ್ತುಗಳು ಅವಶ್ಯಕ ವಸ್ತುಗಳು ಇಲ್ಲಿ ಸಿಗುತ್ತಿದೆ. ಅದು ಕೂಡ ಸಕಾರಣದ ಬೆಲೆಯಲ್ಲಿ ಉತ್ತಮ ದರ್ಜೆಯ ವಸ್ತುಗಳು ಇಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕಿವೆ. ಹೀಗಾಗಿ ಅವಳಿನಗರ ಹಾಗೂ ಧಾರವಾಡ ಜಿಲ್ಲೆಯ ಜನ ಖರೀದಿಗಾಗಿ ಬರ್ತಿದ್ದಾರೆ.
ಗೃಹೋಪಯೋಗಿ ವಸ್ತುಗಳಾದ, ಪೀಠೋಪಕರಣ, ಮಿಕ್ಸಿ, ನೀರಿನ ಫಿಲ್ಟರ್, ಅಡುಗೆ ಸಾಮಾನುಗಳು ಇಲ್ಲಿ ಲಭ್ಯ. ಹಾಗೆಯೇ ಫಿಟ್ನೆಸ್ ಉಪಕರಣಗಳು, ಸೈಕಲ್ ಹಾಗೂ ಸೈಕ್ಲಿಂಗ್ ಪರಿಕರಗಳು, ಇಲೆಕ್ಟ್ರಿಕಲ್ ವಾಹನಗಳು ಹಲವು ವಿಧಗಳಲ್ಲಿ ಇಲ್ಲಿ ಲಭ್ಯ. ಅದರಂತೆ ವ್ಯಾಪಾರ ಮಳಿಗೆ ಅಂದ ಮೇಲೆ ಅಲ್ಲಿ ಬಟ್ಟೆ ಸಿಗದೇ ಇರುತ್ತಾ? ಮಕ್ಕಳಿಂದ ಆರಂಭವಾಗಿ ಹಿರಿಯ ನಾಗರಿಕರು ಧರಿಸುವ ಎಲ್ಲ ಬಗೆಯ ದಿರಿಸುಗಳಿಗೆ ಇಲ್ಲಿ ಉತ್ತಮ ಬೇಡಿಕೆ ಬಂದಿದೆ.
ಗೃಶಶೋಭಾ ಮಾರಾಟ ಮಳಿಗೆ ಮೇ 29ರವರೆಗೆ ನಡೆಯಲಿದೆ. ಬನ್ನಿ..ಪಾಲ್ಗೊಳ್ಳಿ. ನೀವು ಬರುವಾಗ ನಿಮ್ಮವರನ್ನೂ ಕರೆತನ್ನಿ. ಜತೆಗೆ ನಿಮಗಿಷ್ಟವಾದ ವಸ್ತು ಖರೀದಿಸಿ. ಇದು ಗ್ರಾಹಕ ಸ್ನೇಹಿ ಗೃಹಶೋಭಾ, ಪ್ರತಿ ಖರೀದಿಯಲ್ಲೂ ನಿಮಗಿದೆ ಲಾಭ.
Kshetra Samachara
28/05/2022 01:07 pm