ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರುಚಿ-ಶುಚಿ ಪರಿಶುದ್ಧ ಆಹಾರ: 'ಫುಡ್ ಅರೆನಾ' ಈಗ ಹುಬ್ಬಳ್ಳಿಯಲ್ಲಿ

ಹುಬ್ಬಳ್ಳಿ: ಅತ್ಯಂತ ರು‍ಚಿಕರ ಸ್ವಾದಿಷ್ಟ, ಹಾಗೂ ಆರೋಗ್ಯಕರ ಆಹಾರ ಬೆಂಗಳೂರಿನಲ್ಲಿ ಸಿಗುತ್ತೆ ಎಂಬ ಮಾತು ಇತ್ತು. ಆದ್ರೆ ಈಗ ಅಂಥದ್ದೇ ಆಹಾರ ನಮ್ಮ ಹುಬ್ಬಳ್ಳಿಯಲ್ಲೂ ಸಿಗಲು ಸಾಧ್ಯ.

ಹುಬ್ಬಳ್ಳಿಯ ಆಹಾರಪ್ರಿಯರಿಗೆ ಹೊಸ ರುಚಿ ಬೇಕು. ಆ ಹೊಸ ರುಚಿ ಯಾವುದೇ ಕೆಮಿಕಲ್ಸ್ ಹಾಕದೇ ಪರಿಶುದ್ಧವಾಗಿ ತಯಾರಿಸಿರಬೇಕು ಎಂದು ಅವರು ಬಯಸುತ್ತಾರೆ. ಹಾಗಾದ್ರೆ ಕ್ವಾಂಟಿಟಿ-ಕ್ವಾಲಿಟಿ ಎರಡ‌ನ್ನೂ ಅಚ್ಚುಕಟ್ಟಾಗಿ ನಿಭಾಯಿಸುವ ಹೊಟೇಲ್, ಅಥವಾ ಫುಡ್ ಹಬ್ ಎಲ್ಲಿದೆ ಎಂಬುದೇ ಅವರ ಪ್ರಶ್ನೆ. ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಹಿತ-ಮಿತ ಸವಿರುಚಿ ಬಯಸುವ ಜನರಿಗೆ ಹುಬ್ಬಳ್ಳಿಯ ಅಕ್ಷಯ್ ಪಾರ್ಕ್‌ನಲ್ಲಿ ಫುಡ್ ಅರೆನಾ ಶುರುವಾಗಿದೆ‌.‌

ಅರೆನಾ ಅಂದ್ರೆ ಬಯಲು. ಆಹಾರಕ್ಕಾಗಿ ಸುಂದರ ಅಂಗಳವೊಂದನ್ನು ನಿರ್ಮಿಸಬೇಕೆಂಬುದು ಉದ್ಯಮಿ ಉಲ್ಲಾಸ್ ದೊಡಮನಿ ಹಾಗೂ ಅವರ ಕುಟುಂಬದ ಕನಸಾಗಿತ್ತು‌‌. ಈ ಕನಸು ಸಾಕಾರವಾಗಿ ಹುಬ್ಬಳ್ಳಿಯ ಗೋಕುಲ ರಸ್ತೆಯ ಅಕ್ಷಯ‌ ಪಾರ್ಕ್‌ನಲ್ಲಿ ಫುಡ್ ಅರೆನಾ ಎಂಬ ಸವಿರುಚಿ ಆಹಾರ ಅಂಗಳ ತಯಾರಾಗಿದೆ. ಹಾಗೂ ಗಣ್ಯರಿಂದ ನಿನ್ನೆ ಬುಧವಾರವಷ್ಟೇ ಉದ್ಘಾಟ‌ನೆಯಾಗಿದೆ. ಸಿಡಾಕ್‌ CEDOK ಮಾಜಿ ನಿರ್ದೇಶಕ ಶ್ರೀ ಮಾಲತೇಶ್ ಜೀವಣ್ಣವರ ಅವರು ಫುಡ್ ಅರೆನಾಗೆ ಶುಭ ಕೋರಿದ್ದಾರೆ.

ಈ ಸವಿಸುಂದರ ಆಹಾರ ಅಂಗಳದಲ್ಲಿ ಒಟ್ಟು 14 ಆಹಾರ ಮಳಿಗೆಗಳಿವೆ. ಚೈನೀಸ್ ಸೇರಿದಂತೆ, ಪಾನೀಯ, ಸ್ನ್ಯಾಕ್ಸ್, ನೂಡಲ್ಸ್ ಹಾಗೂ ತರಹೇವಾರಿ ರುಚಿಯ ಖಾದ್ಯ ಇಲ್ಲಿ ಲಭ್ಯ. ವಿಶೇಷವೆಂದರೆ ಇಲ್ಲಿನ ಯಾವುದೇ ರೆಸೆಪಿಯಲ್ಲಿ ಕೆಮಿಕಲ್ಸ್ ಪದಾರ್ಥಗಳನ್ನು ಬಳಸೋದಿಲ್ಲ. ಹೀಗಾಗಿ ನಮ್ಮಲ್ಲಿ ಸಿಗುವ ಎಲ್ಲ ಖಾದ್ಯಗಳು ಆರೋಗ್ಯಕಾರಿ ಎನ್ನುತ್ತೆ ದೊಡಮನಿ ಕುಟುಂಬ

ಇನ್ನು ಈ ಫುಡ್ ಅರೆನಾದಲ್ಲಿ ಸಂಜೆ ಹೊತ್ತಲ್ಲಿ ನಿಮ್ಮೊಳಗಿನ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶವಿದೆ. ವಾದ್ಯ ನುಡಿಸಲು, ಹಾಡು ಹಾಡಲು, ಅಥವಾ ಇತರ ಮನೋರಂಜನಾ ಪ್ರತಿಭೆಯನ್ನು ನೆರೆದವರ ಮುಂದೆ ಪ್ರಸ್ತುತಪಡಿಸಲು ಅವಕಾಶ ಇದೆ.

ಮತ್ಯಾಕೆ ತಡ, ಬಗೆ ಬಗೆ ರುಚಿಯ ತಾಜಾ ತಾಜಾ, ಬಿಸಿ ಬಿಸಿ ಆಹಾರ ಸವಿಯಲು ಇಂದೇ ಈಗಲೇ, ಕೂಡಲೇ ಬನ್ನಿ. ನೀವೂ ಬನ್ನಿ, ನಿಮ್ಮ ಗೆಳೆಯ-ಗೆಳತಿ, ಕುಟುಂಬದವರನ್ನೂ ಕರೆತನ್ನಿ. ಫುಡ್ ಅರೆನಾ‌‌ ಆಹಾರ‌‌ ಪ್ರಿಯರನ್ನು ಸದಾ ಸ್ವಾಗತಿಸುತ್ತದೆ.

ರುಚಿ-ಶುಚಿ,

ಹಿತ-ಮಿತ

ಫುಡ್ ಅರೆನಾ

ಅಕ್ಷಯ್ ಪಾರ್ಕ್‌, ಗೋಕುಲ ರಸ್ತೆ,

Edited By : Shivu K
Kshetra Samachara

Kshetra Samachara

14/04/2022 05:40 pm

Cinque Terre

41.63 K

Cinque Terre

9

ಸಂಬಂಧಿತ ಸುದ್ದಿ