ಧಾರವಾಡ: ಧಾರವಾಡದ ಸುಪ್ರಸಿದ್ಧ ಬಿಗ್ ಮಿಶ್ರಾ ಪೇಡಾ ಫ್ಯಾಕ್ಟರಿಗೆ ಸಿಹಿ ಕಹಿ ಚಂದ್ರು ಭೇಟಿ ನೀಡಿ ಸಿಹಿ ತಿಂಡಿ, ತಿನಿಸುಗಳ ತಯಾರಿಕೆಯನ್ನು ವೀಕ್ಷಣೆ ಮಾಡಿ ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಧಾರವಾಡ ಸಮೀಪದ ಕ್ಯಾರಕೊಪ್ಪ ಗ್ರಾಮದಲ್ಲಿ ಬಿಗ್ ಮಿಶ್ರಾ ಪೇಡಾ ತಯಾರಿಕಾ ಫ್ಯಾಕ್ಟರಿ ಇದ್ದು, ಅಲ್ಲಿಗೆ ಭೇಟಿ ನೀಡಿದ ಚಂದ್ರು ಅವರು ಫ್ಯಾಕ್ಟರಿ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಖಾಸಗಿ ಸುದ್ದಿವಾಹಿನಿಯೊಂದು ನಡೆಸುವ ಬೊಂಬಾಟ್ ಭೋಜನ ಕಾರ್ಯಕ್ರಮದ ಅಂಗವಾಗಿ ಶೂಟಿಂಗ್ ನಡೆಸಲು ಚಂದ್ರು ಅವರು ಈ ಬಿಗ್ ಮಿಶ್ರಾ ಫ್ಯಾಕ್ಟರಿಗೆ ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರು ಅವರು, ಧಾರವಾಡ ಪೇಡಾ ಸುಪ್ರಿಸಿದ್ಧಿ ಪಡೆದಿದೆ. ಅದರಷ್ಟೇ ಕರ್ನಾಟಕ ವಿಶ್ವವಿದ್ಯಾಲಯ, ಇಲ್ಲಿನ ಕವಿ ಸಾಹಿತಿಗಳು ಜನಮನ್ನಣೆ ಗಳಿಸಿದ್ದಾರೆ ಎಂದರು.
ಇದಕ್ಕೂ ಮುನ್ನ ಫ್ಯಾಕ್ಟರಿಯಲ್ಲಿ ಒಂದು ಸುತ್ತು ಸುತ್ತಾಡಿದ ಚಂದ್ರು ಅವರು, ಅಲ್ಲಿ ತಯಾರಾಗುವ ಪೇಡಾ, ಬೂಂದಿ, ಬಗೆ ಬಗೆಯ ಸಿಹಿ ಖಾದ್ಯಗಳ ಬಗ್ಗೆ ಮಾಹಿತಿ ಪಡೆದು ರುಚಿ ಕೂಡ ಸವಿದರು. ಈ ವೇಳೆ ಬಿಗ್ ಮಿಶ್ರಾ ಫ್ಯಾಕ್ಟರಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಶ್ರೀಧರ ಪಾಟೀಲ ಅವರು ಹಾಜರಿದ್ದು, ಚಂದ್ರು ಅವರಿಗೆ ಫ್ಯಾಕ್ಟರಿ ಬಗ್ಗೆ ವಿವಿಧ ಮಾಹಿತಿ ನೀಡಿದರು.
Kshetra Samachara
18/12/2021 03:10 pm