ಹುಬ್ಬಳ್ಳಿ- ಅಲ್ ತಾಜ್ ಗ್ರೂಪ್ ಆಫ್ ರೆಸ್ಟೋರೆಂಟ್ ನ 5 ನೇ ಶಾಖೆ ಅ.16 ರಂದು ಇಲ್ಲಿನ ವಿದ್ಯಾನಗರದ ಶಿರೂರ ಪಾರ್ಕ್ ನ ಚೇತನ ಕಾಲೇಜು ಹತ್ತಿರ ಆರಂಭಿಸಲಾಯಿತು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹೊಟೆಲ್ ನ ವ್ಯವಸ್ಥಾಪಕ ನಿರ್ದೇಶಕ ಅಲ್ತಾಫ್ ಬೇಪಾರಿ, ಅಲ್ ತಾಜ್ ದಕ್ಷಿಣ ಭಾರತೀಯ ನಮ್ಮದೇ ಶೈಲಿಯ ಆಹಾರದ ರೆಸ್ಟೋರೆಂಟ್ ಆಗಿದೆ. ಕಳೆದ 20 ವರ್ಷದ ಹಿಂದೆ ಅಂದರೆ 2000 ಇಸ್ವಿಯಲ್ಲಿ ಕೇಶ್ವಾಪುರ ಸರ್ಕಲ್ ನಲ್ಲಿ ಹೊಟೇಲ್ ಆರಂಭಿಸಲಾಯಿತು. ಗ್ರಾಹಕರ ಉತ್ತರ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ ಹಳೇಹುಬ್ಬಳ್ಳಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಈಗಾಗಲೇ ನಾಲ್ಕು ಶಾಖೆಗಳಿದ್ದು, ಇದು ಐದನೇ ಶಾಖೆಯಾಗಿದೆ ಎಂದರು.
ಈಗಾಗಲೇ ಆನ್ಲೈನ್ ಆ್ಯಪ್ ಮೂಲಕ ಮನೆ ಮನೆಗೆ ಆಹಾರವನ್ನು ಡೆಲಿವರಿ ಮಾಡುವ ಸೌಲಭ್ಯ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲೂ ಗ್ರಾಹಕರ ಅಭಿರುಚಿಯಂತೆ ಸೇವೆ, ಗುಣಮಟ್ಟ ನೀಡಲಾಗುವುದು ಎಂದರು.
Kshetra Samachara
16/10/2021 09:29 pm