ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಕ್ಸೀಡ್ ಕ್ರಾಪ್ ಸೈನ್ಸ್ ಕಂಪನಿಯಿಂದ ಆರ್ಗಾನಿಕ್ ಪೋಟ್ಯಾಶ್ ಉತ್ಪಾದನೆ

ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ರಾಜ್ಯದಲ್ಲಿಯೂ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಈಗಾಗಲೇ ಸ್ವಾವಲಂಬಿ ಭಾರತದ ಪರಿಕಲ್ಪನೆ ಚಿಗುರೊಡೆಯುತ್ತಿರುವಾಗಲೇ, ಕೃಷಿ ಕ್ಷೇತ್ರವನ್ನೆ ನಂಬಿರುವ ಭಾರತ ಅದರಲ್ಲೂ ಕರ್ನಾಟಕದಲ್ಲಿ ಇದರ ಪ್ರಯೋಗ ನಡೆದಿರುವುದು ಗಮನಾರ್ಹ.

ಕೃಷಿ ಕ್ಷೇತ್ರದಲ್ಲಿಯ ಈ ವಿನೂತನ ಪ್ರಯೋಗಕ್ಕೆ ನಾಂದಿ ಹಾಡಿರುವುದು ಎಕ್ಸೀಡ್ ಕ್ರಾಪ್ ಸೈನ್ಸ್ ಪ್ರೈವೇಟ್ ಲಿಮಿಟೆಡ್ ಎಂದು ಹೆಮ್ಮೆಯಿಂದ ಹೇಳಬಹುದು. ದೇಶೀಯವಾಗಿ ದೊರೆಯುವ ಕಚ್ಚಾ ವಸ್ತುಗಳನ್ನು ಬಳಸಿ ಆರ್ಗಾನಿಕ್ ಪೋಟ್ಯಾಶ್ ತಯಾರಿಸುವ ಸಂಸ್ಥೆಯ ಸಾಧನೆ ಅನಾವರಣಗೊಂಡಿದ್ದು, ಈಚೆಗೆ ಹುಬ್ಬಳ್ಳಿ ನಗರದಲ್ಲಿ ಜರುಗಿದ ಕಾರ್ಯಕ್ರಮವೊಂದರಲ್ಲಿ.

ಕಳೆದ ಅಕ್ಟೋಬರಂದು 8 ಫಾರ್ಚುನ್ ಪಾರ್ಕ್ ಹೋಟೆಲಿನಲ್ಲಿ ಹಮ್ಮಿಕೊಂಡಿದ್ದ ಹುಬ್ಬಳ್ಳ್ಳಿಯ ಎಕ್ಸೀಡ್ ಸ್ಟಾರ್ ಡೀಲರ್ ಮೀಟಿಂಗ್ ಇದಕ್ಕೆ ಸಾಕ್ಷಿಯಾಯಿತು. ಈ ಕಾರ್ಯಕ್ರಮಕ್ಕೆ ಕರ್ನಾಟಕದ ಎಲ್ಲ ಭಾಗದಿಂದ ರಸಗೊಬ್ಬರ ಮಾರಾಟಗಾರರು ಆಗಮಿಸಿದ್ದು ವಿಶೇಷವಾಗಿತ್ತು.

ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಮೋಹನ ಲಿಂಬೀಕಾಯಿಯವರು ಆಗಮಿಸಿದ್ದರು. ಧಾರವಾಡ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾದ ರಾಜಶೇಖರ ಬಿಜಾಪುರ ಹಾಗೂ ಗದಗ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾದ ಟಿ ಎಸ್ ರುದ್ರೇಶಪ್ಪ ಉಪಸ್ಥಿತರಿದ್ದರು

ಇವರೆಲ್ಲರ ಸಮ್ಮುಖದಲ್ಲಿ ಕಂಪನಿಯ ಒಂದು ಹೊಸ ಆರ್ಗಾನಿಕ್ ಪೋಟ್ಯಾಶ್ ಎಂಬ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ M P ನಾಗರಾಜ್ ಅವರು, ಭಾರತ ಸರಕಾರದ ಆತ್ಮ ನಿರ್ಭರ ಭಾರತ ಅಭಿಯಾನದಿಂದ ಉತ್ತೇಜನ ಪಡೆದು ದೇಶದಲ್ಲಿಯೇ ದೊರೆಯುವ ಕಚ್ಚಾ ವಸ್ತುಗಳಿಂದ ಆರ್ಗಾನಿಕ್ ಪೋಟ್ಯಾಶ್ ತಯಾರಿಸುತ್ತಿರುವುದು ಹೆಮ್ಮೆಯ ವಿಚಾರ. ಇದರ ಉಪಯೋಗವನ್ನು ರೈತರು ಪಡೆಯಬೇಕೆಂದು ಮನವಿ ಮಾಡಿದರು. ಕಂಪನಿಯ ವ್ಯೆವಸ್ಥಾಪಕ ನಿರ್ದೇಶಕರುಗಳು ಹಾಗೂ ಕಂಪನಿಯ ಎಲ್ಲ ಮಾರಾಟ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Edited By : Shivu K
Kshetra Samachara

Kshetra Samachara

14/10/2021 01:28 pm

Cinque Terre

34.98 K

Cinque Terre

0

ಸಂಬಂಧಿತ ಸುದ್ದಿ