ಧಾರವಾಡ: ನುಗ್ಗಿಕೇರಿ ಧರ್ಮ ವ್ಯಾಪಾರ ಗಲಾಟೆ ವಿಚಾರವಾಗಿ, ಈ ಗಲಾಟೆ ಘಟನೆಗೆ ಜಿಲ್ಲಾಡಳಿತವೇ ಕಾರಣ. ಜಿಲ್ಲಾಡಳಿತ ಸಂಪೂರ್ಣ ಕುಸಿದು ಹೋಗಿದೆ ಎಂದು ಎಐಸಿಸಿ ಸದಸ್ಯ ದೀಪಕ ಚಿಂಚೊರೆ ಜಿಲ್ಲಾಡಳಿತದ ಮೇಲೆ ಆರೋಪ ಮಾಡಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮ ವ್ಯಾಪಾರ ಗಲಾಟೆ ಬೇರೆ ಜಿಲ್ಲೆಯಗಳಲ್ಲಿ ಈ ಮೊದಲೇ ಶುರುವಾಗಿತ್ತು. ಹೀಗಾಗಿ ಧಾರವಾಡ ಜಿಲ್ಲಾಡಳಿತ ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು. ಈ ಧಾಂದಲೇ, ಗಲಾಟೆಯಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಎರಡೂ ಫೇಲ್ ಆಗಿವೆ. ಇನ್ನಾದರೂ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠರು ಎಚ್ಚೆತ್ತುಕೊಳ್ಳಬೇಕು. ಹಿಂದೂ, ಮುಸ್ಲಿಂ ಯಾರೇ ಇರಲಿ ಅವರನ್ನು ಬಂಧಿಸಬೇಕು. ಮುಂದೆ ಹೀಗೆ ಆಗದಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
Kshetra Samachara
10/04/2022 02:52 pm