ಕಲಘಟಗಿ: ತಾಲೂಕಿನ ಬಮ್ಮಿಗಟ್ಟಿ ಗ್ರಾಮದಲ್ಲಿ ಎಲೆಕ್ಟ್ರಿಕಲ್ ಬೈಕ್‌ನ ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹತ್ತಿ ಬ್ಯಾಟರಿ ಧಗಧಗ ಹೊತ್ತಿ ಉರಿದ ಘಟನೆಯೊಂದು ಸಂಭವಿಸಿದೆ.
ಗ್ರಾಮದ ಶಂಕರ ಸಾದರ ಎಂಬುವವರ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾದ ದೊಡ್ಡ ಅನಾಹುತ ಕೂಡಾ ತಪ್ಪಿದೆ. ದಿಢೀರನೆ ಎಲೆಕ್ಟ್ರಿಕಲ್ ಬೈಕ್ ನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಕೂಡಲೇ ಬ್ಯಾಟರಿ ಹೊರೆ ತೆಗೆದು ಕೆಳಗೆ ಇಟ್ಟಿದ್ದಾರೆ.
ಆಗ ಎಲೆಕ್ಟ್ರಿಕಲ್ ಬ್ಯಾಟರಿ ಸಂಪೂರ್ಣ ಹೊತ್ತಿ ಉರಿದಿದೆ. ಇದರಿಂದ ಸವಾರನ ಸಮಯಪ್ರಜ್ಞೆಯಿಂದ ಇಲೆಕ್ಟ್ರಿಕಲ್ ಬೈಕ್ ಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದ್ದು, ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Kshetra Samachara
21/09/2022 10:37 pm