ಧಾರವಾಡ: ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ವೆಂಕಟಾಪುರದ ಬಳಿ ಟ್ರ್ಯಾಕ್ಟರ್ ಹಾಗೂ ಕ್ಯಾಂಟರ್ ವಾಹನದ ಮಧ್ಯೆ ಡಿಕ್ಕಿ ಸಂಭವಿಸಿ ಟ್ರ್ಯಾಕ್ಟರ್‌ನಲ್ಲಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿ, ಇನ್ನೋರ್ವ ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಸಿಂಗನಹಳ್ಳಿ ಗ್ರಾಮದ ಫಕ್ರುಸಾಬ್ ಮಾಳಗಿ (37) ಎಂಬಾತನೇ ಸಾವನ್ನಪ್ಪಿದ ವ್ಯಕ್ತಿ ಅದೇ ಗ್ರಾಮದ ಇನ್ನೋರ್ವ ವ್ಯಕ್ತಿ ಹಬೀಬ್ ಎಂಬಾತ ತೀವ್ರವಾಗಿ ಗಾಯಗೊಂಡಿದ್ದಾನೆ.
ಅಪಘಾತವಾದ ನಂತರ ಸ್ಥಳಕ್ಕೆ ಗರಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
Kshetra Samachara
20/08/2022 07:55 pm