ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೇವಡಿಹಾಳ್ ರಸ್ತೆ ತಿರುವಿನಲ್ಲಿ ಬೈಕ್ ಅಪಘಾತ: ಇಬ್ಬರು ಯುವಕರ ಸಾವು

ಹುಬ್ಬಳ್ಳಿ : ಕಳೆದ ರಾತ್ರಿ ನಗರದ ಅಕ್ಷಯ್ ಪಾರ್ಕ್ ನಿವಾಸಿ ಸಂತೋಷ್ ಹಾಗೂ ಜಯಪ್ರಕಾಶ್ ನಗರ ನಿವಾಸಿ ಥಾಮಸ್ ಸೇರಿ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿ ಹುಬ್ಬಳ್ಳಿಗೆ ವಾಪಸ್ ಬರುವ ವೇಳೆ ರೇವಡಿಹಾಳ್ ರಸ್ತೆಯಲ್ಲಿ ಮಧ್ಯರಾತ್ರಿ ಭೀಕರ ಅಪಘಾತ ನಡೆದು ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.

ಅಕ್ಷಯ್ ಪಾರ್ಕ್ ನಿವಾಸಿಯಾಗಿರುವ ಸಂತೋಷ್ ಸಾಫ್ಟ್ ವೇರ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ, ಇನ್ನು ಜಯಪ್ರಕಾಶ್ ನಗರ ಥಾಮಸ್ ನಗರದ ಸ್ಟಾರ್ ಹೋಟೇಲ್ ಅಡುಗೆ ಭಟ್ಟನಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.

ಸದ್ಯ ಇಬ್ಬರ ಶವ ಕಿಮ್ಸ್ ಶವಾಗಾರಕ್ಕೆ ರವಾನಿಸಿದ್ದು ಉತ್ತರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By : Nirmala Aralikatti
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/07/2022 12:49 pm

Cinque Terre

98.34 K

Cinque Terre

7

ಸಂಬಂಧಿತ ಸುದ್ದಿ