ನವಲಗುಂದ: ಭಾವೈಕ್ಯತೆಗೆ ಸಾಕ್ಷಿಯಾದ ಯಮನೂರ ಚಾಂಗದೇವನ ದರ್ಶನಕ್ಕೆ ಬಂದ ಯುವಕನೋರ್ವ ಭಾನುವಾರ ಬೆಳಿಗ್ಗೆ ಬೆಣ್ಣೆ ಹಳ್ಳದಲ್ಲಿ ಸ್ನಾನಕ್ಕೆ ಹೋಗಿದ್ದ. ಈ ವೇಳೆ ಯುವಕ ಫಿಟ್ಸ್‌ಗೆ ಒಳಗಾಗಿದ್ದರಿಂದ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಯುವಕನ ಶವ ಹೊರ ತೆಗೆದಿದ್ದಾರೆ.
ಗೋವಾದಿಂದ ಚಾಂಗದೇವನ ದರ್ಶನಕ್ಕೆ ಬಂದ ಕುಟುಂಬಸ್ಥರು ದರ್ಶನ ಮುಗಿಸಿ, ಬೆಣ್ಣೆ ಹಳ್ಳಕ್ಕೆ ಸ್ನಾನಕ್ಕೆಂದು ಇಳಿದಿದ್ದಾರೆ. ಈ ವೇಳೆ ಯುವಕ ಫಿಟ್ಸ್‌ಗೆ ಒಳಗಾಗಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ನವಲಗುಂದ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ ಮಠಪತಿ, ಪಿಎಸ್ಐ ಕಲ್ಮೇಶ ಬೆನ್ನೂರ ಹಾಗೂ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಶವವನ್ನು ಹೊರ ತೆಗೆದು, ನವಲಗುಂದ ತಾಲೂಕಾ ಆಸ್ಪತ್ರೆಗೆ ರವಾನಿಸಿದ್ದಾರೆ.
Kshetra Samachara
19/06/2022 12:06 pm