ಹುಬ್ಬಳ್ಳಿ ಬ್ರೇಕಿಂಗ್: ಹುಬ್ಬಳ್ಳಿಯ ಬೈಪಾಸ್ ರಸ್ತೆ ನಿಜಕ್ಕೂ ರಕ್ತದ ರಸ್ತೆಯಾಗಿದೆ. ಮೊನ್ನೆಯಷ್ಟೇ ಬೆಳ್ಳಂಬೆಳಿಗ್ಗೆ ಒಂಬತ್ತು ಜನರನ್ನು ಬಲಿ ಪಡೆದಿದ್ದ ಈ ರಸ್ತೆ ಈಗ ಮದುಮಗನ ಜೀವ ಬಲಿ ಪಡೆದಿದೆ.
ಬೊಲೆರೋ ಕಾರ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯ ತಾರಿಹಾಳ ರೋಡ ಬಳಿಯ ಬೈಪಾಸದಲ್ಲಿ ನಡೆದಿದೆ. ಹುಬ್ಬಳ್ಳಿ ತಾಲ್ಲೂಕಿನ ಚಳಮಟ್ಟಿ ಗ್ರಾಮದ ನಿವಾಸಿ ಆನಂದ ಮಾದರ (27) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಮದುಮಗ.
ಕಳೆದ ಒಂದು ವಾರದ ಹಿಂದೆ ಆನಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ. ಬ್ಯಾಂಕ್ ಕೆಲಸಕ್ಕೆಂದು ತಾರಿಹಾಳಕ್ಕೆ ಹೋಗಿದ್ದ ಎಂದು ತಿಳಿದು ಬಂದಿದೆ. ಆದರೆ ದುರಾದೃಷ್ಟವಶಾತ್ ರಾಷ್ಟ್ರೀಯ ಹೆದ್ದಾರಿ ಈ ಯುವಕನನ್ನು ಬಲಿ ಪಡೆದಿದೆ. ಈ ಕುರಿತು ಹುಬ್ಬಳ್ಳಿ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
27/05/2022 04:46 pm