ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕ್ರೂಸರ್ ವಾಹನ ಚಾಲಕ ಬದಲಾಗಿದ್ದೇ ಅಪಘಾತಕ್ಕೆ ಕಾರಣವಾಯ್ತಾ?

ಧಾರವಾಡ: ತಾಲೂಕಿನ ಬಾಡ ಗ್ರಾಮದ ಬಳಿ ನಡೆದ ಭೀಕರ ರಸ್ತೆ ಅಪಘಾತ ಪ್ರಕರಣಕ್ಕೆ ಚಾಲಕನ ಬದಲಾವಣೆಯೇ ಕಾರಣವಾಯ್ತಾ? ಎಂಬ ಪ್ರಶ್ನೆ ಮೂಡಿದೆ. ಕ್ರೂಸರ್ ವಾಹನದ ಮೊದಲಿದ್ದ ಚಾಲಕ ಬೇರೆ, ಬಳಿಕ ಬಂದವನೇ ಬೇರೆ ಎಂಬ ಮಾಹಿತಿ ಲಭ್ಯವಾಗಿದೆ.

ವಧುವಿನ ಕಡೆಯವರನ್ನು ಕರೆದುಕೊಂಡು ಬಂದಿದ್ದ ಕ್ರೂಸರ್ ಇದಾಗಿದ್ದು, ಅದೇ ಕ್ರೂಸರ್‌ನಲ್ಲಿ ಜನರು ನಿಗದಿ ಗ್ರಾಮಕ್ಕೆ ಹೊರಟಿದ್ದರು. ನಿಶ್ಚಿತಾರ್ಥ ಕಾರ್ಯದ ಬಳಿಕ ನಿಗದಿಗೆ ಹೊರಟಿದ್ದ ವೇಳೆ ಅಪಘಾತ ಸಂಭವಿಸಿದೆ.

ಮನ್ಸೂರ ಕಲ್ಯಾಣ ಮಂಟಪಕ್ಕೆ ಮದುವೆ ಸ್ಥಳಾಂತರವಾಗಿತ್ತು. ನಿಗದಿ ಗ್ರಾಮದ ಮಂಜುನಾಥ ಜತೆ ರೂಪಾ ಎಂಬುವವರ ಮದುವೆ ನಡೆಯಬೇಕಿತ್ತು. ಬೆಳಿಗ್ಗೆ ನಿಗದಿಯಲ್ಲಿ ಮತ್ತೊಂದು ದೇವರ ಕಾರ್ಯ ನಡೆಯಬೇಕಿತ್ತು. ಅದಕ್ಕಾಗಿ ನಿಗದಿಗೆ ಮಧ್ಯರಾತ್ರಿಯೇ ಸಂಬಂಧಿಗಳು ತೆರಳುತ್ತಿದ್ದರು. ಈ ವೇಳೆ ಚಾಲಕ ಬದಲಾಗಿದ್ದರು ಎನ್ನಲಾಗಿದೆ. ಚಾಲಕ ಬದಲಾಗಿದ್ದನ್ನು ವಧುವಿನ ಕಡೆಯವರು ಗಮನಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

Edited By :
Kshetra Samachara

Kshetra Samachara

21/05/2022 12:43 pm

Cinque Terre

38.85 K

Cinque Terre

1

ಸಂಬಂಧಿತ ಸುದ್ದಿ