ಹುಬ್ಬಳ್ಳಿ: ಲಾರಿಗಳೆರಡರ ನಡುವೆ ಪರಸ್ಪರ ಎದುರು ಬದರು ಡಿಕ್ಕಿ ಹೊಡೆದ ಪರಿಣಾಮ ಚಾಲಕರಿಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ಅಂಚಟಗೇರಿ ಬಳಿ ನಡೆದಿದೆ.
ಅಪಘಾತದಲ್ಲಿ ಚಿತ್ರದುರ್ಗದ ಮಹ್ಮದ ಸೈಫುಲ್ಲಾ ಹಾಗೂ ಮಹಾರಾಷ್ಟ್ರ ಕೊಲ್ಲಾಪುರದ ವಿಶ್ವಾಸ ಪಾಂಡರಬಳಿ ಗಾಯಗೊಂಡಿದ್ದಾರೆ. ಸೈಫುಲ್ಲಾ ನಗರದಿಂದ ಕಾರವಾರ ಕಡೆಗೆ ಹೊರಟಿದ್ದಾಗ ಹಾಗೂ ಎದುರಿಗೆ ಬರುತ್ತಿದ್ದ ಕಬ್ಬಿನ ಲಾರಿಗಳ ನಡುವೆ ಪರಸ್ಪರ ಅಪಘಾತ ಸಂಭವಿಸಿದೆ. ಎರಡೂ ಲಾರಿಗಳಿಗೆ ಹಾನಿಯಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
14/02/2022 10:13 am