ಹುಬ್ಬಳ್ಳಿ: ಚಿಗರಿ ಬಸ್ ಚಾಲಕ ರಾಂಗ್ ರೂಟ್ ನಲ್ಲಿ ಬಂದು ಬೈಕ್ ಸಂಚರಿಸುತ್ತಿದ್ದ ವೃದ್ಧನಿಗೆ ಗುದ್ದಿ ಪರಾರಿಯಾದ ಘಟನೆ, ನಗರದ ಐಟಿ ಪಾರ್ಕ್ ಮುಂಭಾಗದ ಸ್ವಿಮ್ಮಿಂಗ್ ಫೂಲ್ ಕಾಂಪ್ಲೆಕ್ಸ್ ಬಳಿ ನಡೆದಿದೆ.
ಹುಬ್ಬಳ್ಳಿ-ಧಾರವಾಡ ಚಿಗರಿ ಬಸ್‌ಗಳಿಗೆ ಸ್ಮಾರ್ಟ್ ಸಿಟಿ ಅಡಿಯಲ್ಲಿ ಪ್ರತ್ಯೇಕವಾದ ರಸ್ತೆಯನ್ನು ನಿರ್ಮಿಸಿದ್ದಾರೆ. ಆದ್ರೆ ಈ ಬಸ್ ಚಾಲಕ ಅಜಾಗರೂಕತೆಯಿಂದ ರಾಂಗ್ ರೂಟ್‌ನಲ್ಲಿ ಬಂದು ಬೈಕ್ ಚಲಾಯಿಸುತ್ತಿದ್ದ ವೃದ್ಧನಿಗೆ ಗುದ್ದಿದ ಪರಿಣಾಮ ಚಾಲಕ ಗಂಭೀರ ಗಾಯಗೊಂಡಿದ್ದಾರೆ.
ಚಿಗರಿ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ವೃದ್ಧನನ್ನು ಸಾರ್ವಜನಿಕರು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರಿ ಭೇಟಿ ನೀಡಿ, ಬಸ್‌ನ್ನು ಅಲ್ಲಿಂದ ತೆಗೆದುಕೊಂಡು ಹೋಗಿದ್ದಾರೆ. ಈ ಘಟನೆ ಕಾಟನ್‌ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Kshetra Samachara
24/12/2021 11:46 am