ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ಬೆಳ್ಳಂಬೆಳಿಗ್ಗೆ ಅಡುಗೆ ಅನಿಲ ಸ್ಪೋಟ: ಬೆಚ್ಚಿದ ಗ್ರಾಮಸ್ಥರು...!

ಗದಗ : ಬೆಳ್ಳಂಬೆಳಗ್ಗೆ ಮನೆಯಲ್ಲಿದ್ದ ಅಡುಗೆ ಸಿಲಿಂಡರ್ ಸ್ಪೋಟಗೊಂಡಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸೋಮವ್ವ ಶೇಖಪ್ಪ ಲಮಾಣಿ ಎಂಬುವವರ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡಿದ್ದು, ಎಚ್.ಪಿ ಗ್ಯಾಸ್ ಸೂರಣಗಿ ಏಜೆನ್ಸಿ ಗೆ ಸಂಬಂಧಿಸಿದ ಸಿಲಿಂಡರ್ ಇದಾಗಿದೆ. ಸಿಲಿಂಡರ್ ಸ್ಪೋಟದ ರಭಸಕ್ಕೆ ಮನೆಯವರಿಗೆ ಗಾಯಗಳಾಗಿದ್ದು, ಸ್ಪೋಟದ ತೀವ್ರತೆಗೆ ಮನೆಯಲ್ಲಿದ್ದ ವಸ್ತುಗಳು ಚಲ್ಲಾಪಿಲ್ಲಿಯಾಗಿವೆ.

ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳೊಂದಿಗೆ ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಮತ್ತು ಸಿಲಿಂಡರ್ ಏಜೆನ್ಸಿಯವರು ಭೇಟಿ ನೀಡಿ ಅಗ್ನಿ ನಂದಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

17/10/2021 03:01 pm

Cinque Terre

36.2 K

Cinque Terre

0

ಸಂಬಂಧಿತ ಸುದ್ದಿ