ಹುಬ್ಬಳ್ಳಿ : ನಗರದ ಕಾರವಾರ ರಸ್ತೆ ಅಂಚಟಗೇರಿ ಕ್ರಾಸ್ ಬಳಿ, ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ, ಉಂಟಾಗಿರುವ ಗುಂಡಿಯಲ್ಲಿ ಬಿದ್ದು ಬೈಕ್ ಸವಾರನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಡರಾತ್ರಿ ನಡೆದಿದೆ.
ಧಾರವಾಡ ತೇಗೂರ ನಿವಾಸಿ ಪುಂಡಲೀಕ ಅಪ್ಪಣ್ಣ ಅಪ್ಲೋಜಿಯವರ ( 23 ) ಮೃತಪಟ್ಟ ವ್ಯಕ್ತಿ, ಹುಬ್ಬಳ್ಳಿ ಕಡೆಯಿಂದ ಅಂಚಟಗೇರಿ ಕಡೆಗೆ ಬೈಕ್‌ನಲ್ಲಿ ಹೊರಟಿದ್ದ. ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಅಲ್ಲಲ್ಲಿ ಮಣ್ಣು ಹಾಕಲಾಗಿತ್ತು. ಇದನ್ನು ಗಮನಿಸದೆ ಪುಂಡಲೀಕ ಮುಂದೆ ಸಾಗಿದ್ದ ವೇಳೆ ರಸ್ತೆಗುಂಡಿಯಲ್ಲಿ ಬೈಕ್ ಇಳಿದು ನಂತರ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಪುಂಡಲೀಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಕುರಿತು ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
29/09/2021 01:28 pm