ಮುಲ್ಕಿ: ಕಿನ್ನಿಗೋಳಿ ಸಮೀಪದ ಮೂರುಕಾವೇರಿ ಕೆಮ್ಮಡೆ ಬಳಿ ಚಿರತೆಯೊಂದು ದಾಳಿ ಮಾಡಿ ಆಡನ್ನು ಕೊಂದು ಹಾಕಿ ಬಳಿಕ ಕೊಂಡು ಹೋಗಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕೆಮ್ಮಡೆ ನಿವಾಸಿ ಕಲ್ಯಾಣಿ ಎಂಬವರು ಜೀವನೋಪಾಯಕ್ಕಾಗಿ ಯೋಜನೆಯ ಮೂಲಕ ಸುಮಾರು 15ಕ್ಕೂ ಹೆಚ್ಚು ಆಡುಗಳನ್ನು ಸಾಕುತ್ತಿದ್ದು ಸಂಜೆ ವೇಳೆ ಏಕಾಏಕಿ ಚಿರತೆ ದಾಳಿ ಮಾಡಿ ಒಂದು ಆಡನ್ನು ಕೊಂಡು ಹೋಗಿದೆ ಎನ್ನಲಾಗಿದೆ.
ಚಿರತೆ ಸಂಜೆಯಿಂದಲೇ ಕಲ್ಯಾಣಿ ಅವರ ಮನೆ ಬಳಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದು ಮರದ ಮೇಲೆ ಹತ್ತಿ ಕುಳಿತುಕೊಂಡಿತ್ತು ಎಂದು ಮನೆಯವರು ತಿಳಿಸಿದ್ದಾರೆ. ಕೆಮ್ಮಡೆ ಪರಿಸರದ ತೋಟದಲ್ಲಿ ಮಂಗ ಗಳ ಕಾಟ ವಿಪರೀತವಾಗಿದ್ದು ಕಲ್ಯಾಣಿ ಮನೆಯವರು ಮರದಲ್ಲಿ ಕುಳಿತಿದ್ದ ಚಿರತೆಯನ್ನು ಮಂಗ ಎಣಿಸಿ ಸುಮ್ಮನಾಗಿದ್ದಾರೆ. ಆದರೆ ಚಿರತೆ ತನ್ನ ಚಾಣಾಕ್ಷ ಬುದ್ಧಿ ಯನ್ನು ಆಡನ್ನು ಎಗರಿಸಿ ಪರಾರಿಯಾಗಿದೆ.
ಕಿನ್ನಿಗೋಳಿ ಸಮೀಪದ ಕೆಮ್ಮಡೆ ಪರಿಸರದಲ್ಲಿ ಹೆಚ್ಚಾಗಿ ಹಿಂದುಳಿದ ವರ್ಗದ ಜನ ನೆಲೆಸಿದ್ದು ಚಿರತೆ ದಾಳಿಯಿಂದ ಜೀವನ ನಡೆಸುವುದು ಹೇಗೆ? ಎಂಬ ಚಿಂತೆ ಎದುರಾಗಿದೆ. ಕಳೆದ ದಿನದ ಹಿಂದೆ ಕಟೀಲು ಸಮೀಪದ ಎಕ್ಕಾರು ಪರಿಸರದಲ್ಲಿ ಇದೇ ರೀತಿ ಚಿರತೆ ದಾಳಿಯಿಂದ ನಾಯಿ ತಪ್ಪಿಸಿಕೊಂಡಿದ್ದರೆ ಕರು ಬಲಿಯಾಗಿತ್ತು.
ಕೂಡಲೇ ಅರಣ್ಯಾಧಿಕಾರಿಗಳು ಕಿನ್ನಿಗೋಳಿ-ಕಟೀಲು ಪರಿಸರದಲ್ಲಿ ಚಿರತೆ ದಾಳಿಯಿಂದ ಸಾಕುಪ್ರಾಣಿಗಳಿಗೆ ರಕ್ಷಣೆ ಒದಗಿಸಲು ಮುಂದಾಗಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
Kshetra Samachara
15/08/2021 10:41 pm