ಹುಬ್ಬಳ್ಳಿ: ತಾಂತ್ರಿಕ ದೋಷದ ಕಾರಣ ಮೆಣಸಿನಕಾಯಿಸಾಗಿಸುತ್ತಿದ್ದ ವಾಹನವೊಂದು ಹೊತ್ತಿ ಉರಿದ ಘಟನೆ ಹುಬ್ಬಳ್ಳಿಯಲ್ಲಿ ತಡರಾತ್ರಿ ಸಂಭವಿಸಿದೆ. ನಗರದ ಗದಗ ರೋಡ್ ವಾಹನ ಬೆಂಕಿಯಿಂದ ಸುಟ್ಟು ಕರಕಲಾಗಿದೆ. ಇನ್ನು ಈ ವಾಹನ ಬಂಡಿವಾಡದ ಮಾರುತೆಪ್ಪ ಹನುಮಂತಪ್ಪ ದುರ್ಗಮ್ಮಣ್ಣವರ ಎಂಬುವರಿಗೆ ಸೇರಿದ್ದಾಗಿದ್ದು,ಬಂಡಿವಾಡದಿಂದ ಹುಬ್ಬಳ್ಳಿಯ ಎಪಿಎಂಸಿ ಗೆ ಮೆಣಸಿನಕಾಯಿ ತರುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮೂರು ಮೆಣಸಿನಕಾಯಿ ಚೀಲಗಳು ಬೆಂಕಿಗೆ ಆಹುತಿ ಆಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಹುಬ್ಬಳ್ಳಿಯ ಕೇಶ್ವಪುರದ ಪೊಲೀಸರು ಬೆಂಕಿ ನಂದಿಸುವ ಕಾರ್ಯ ಮಾಡಿದ್ದು. ಈ ಕುರಿತು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
06/02/2021 10:32 am