ಹುಬ್ಬಳ್ಳಿ: ಜನವರಿ 15ರಂದು ಹುಬ್ಬಳ್ಳಿ-ಧಾರವಾಡ ಬೈಪಾಸ್ ನಲ್ಲಿ ಭೀಕರ ಅಪಘಾತದಲ್ಲಿ 8ಜನ ಗೆಳತಿಯರು ಮೃತಪಟ್ಟಿದ್ದರು. ಭೀಬತ್ಸ ಘಟನೆ ಬಗ್ಗೆ ಕೇಳಿ ಇಡೀ ಅವಳಿನಗರದ ಜನತೆ ಬೆಚ್ಚಿ ಬಿದ್ದಿದ್ದರು.
ಇದೇ ಘಟನೆಯ ಇನ್ನೊಂದು ನೋವಿನ ಸಂಗತಿ ಎಂದರೆ ಘಟನೆಯಲ್ಲಿ ಮಾರಣಾಂತಿಕವಾಗಿ ಗಾಯಗೊಂಡಿದ್ದ ವೇದಾ ಎಂಬುವವರು ಇಂದು ಮೃತಪಟ್ಟಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಬೆಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ವೇದಾ ಅವರು ಮೃತಪಟ್ಟಿದ್ದಾರೆ. ಮೃತ ವೇದಾ ಅವರು ಮಾಜಿ ಶಾಸಕ ಎಚ್. ಚಂದ್ರಶೇಖರ್ ಅವರ ಪುತ್ರ ಎಚ್ ಎಂ ಮಂಜುನಾಥ್ ಅವರ ಧರ್ಮಪತ್ನಿ. ಈ ಮೂಲಕ ಮೃತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
Kshetra Samachara
24/01/2021 05:20 pm