ಲಕ್ಷ್ಮೇಶ್ವರ: ಒಂದು ವಾರದ ಹಿಂದೆಯೆ ಅಕಾಲಿಕ ಮಳೆಯಿಂದ ಜೋಳವು ಸಂಪೂರ್ಣ ಬಿದ್ದು ಹಾಳಾಗಿ ಹೋಗಿತ್ತು.ಈಗ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ರೈತ ಭರಮಪ್ಪ ಬೀರಪ್ಪ ಕಂಬಳೆ ಎಂಬ ರೈತರ 3 ಎಕರೆ ಬಿಳಿ ಜೋಳ ಸುಟ್ಟು ಕಲಕಲಾಗಿ ಹೋಗಿದೆ.
ಲಕ್ಷ್ಮೇಶ್ವರ ತಾಲೂಕಿನ ಬಡ್ನಿ ಗ್ರಾಮದ ರೈತ ಭರಮಪ್ಪ ಕಂಬಳೆಯವರು ತಮ್ಮ ಜಮೀನಿನಲ್ಲಿ ಬಿಳಿ ಜೋಳ ಬೆಳೆದ್ದಿದ್ದರು ಬೆಳೆ ಸಂಪೂರ್ಣವಾಗಿ ಕಟಾವಿ ಬಂದಿತ್ತು. ಅದ್ಯಾರ ಕಣ್ಣ ಬಿತ್ತೋ ಗೊತ್ತಿಲ್ಲ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ಬೆಳೆಯೂ ಸಂಪೂರ್ಣವಾಗಿ ಸುಟ್ಟುಹೋಗಿದೆ, ದನ ಕರುಗಳಿಗೂ ತಿನ್ನುವುದಕ್ಕೂ ಬರುವುದಿಲ್ಲ ಅಷ್ಟರ ಮಟ್ಟಿಗೆ ಸುಟ್ಟು ಕರಕಲಾಗಿದೆ.
ಮೊನ್ನೆ ತಾನೇ ಆಕಾಲಿಕ ಮಳೆಯಿಂದ ಬಿಳಿ ಜೋಳ ಹಾಳಾಗಿ ಹೋಗಿತ್ತು ಅದನ್ನೇ ಅಲ್ಪ ಸ್ವಲ್ಪ ಜೋಳ ಕೊಯ್ದು ಕೊಂಡು ದನ ಕರಗಳಿಗೆ ಆಗುತ್ತೆ ಎಂದುಕೊಂಡಿದ್ದೇವು ಆದರೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ಸಂಪೂರ್ಣ ಬೆಳೆ ಹಾಳಾಗಿದೆ ದೇವರಿಗೆ ನಮ್ಮ ಮೇಲೆ ಕರುಣೆಯೇ ಇಲ್ಲದಂತಾಗಿದೆ ಎಂದು ರೈತ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.
Kshetra Samachara
22/01/2021 01:15 pm