ಕಲಘಟಗಿ:ತಾಲೂಕಿನಹುಣಸಿಕಟ್ಟಿ ಗ್ರಾಮದ ಹದ್ದಿನ ಹೊಲದಲ್ಲಿ ಮಂಗಗಳು ಅಡ್ಡ ಬಂದ ಪರಿಣಾಮ ಚಕ್ಕಡಿ ಪಲ್ಟಿಯಾಗಿ ರೈತ ಚಕ್ಕಡಿ ಮೇಲಿಂದ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಭಾನುವಾರ ಜರುಗಿದೆ.
ಮೃತನನ್ನು ಕಲಘಟಗಿ ತಾಲೂಕಿನ ಹುಣಸಿಕಟ್ಟಿ ಗ್ರಾಮದ ಮಲ್ಲನಗೌಡ ಬಸನಗೌಡ ಶಿವನಗೌಡ್ರ (38) ಎಂದು ಗುರುತಿಸಲಾಗಿದೆ.
ಈತ ಮನೆಯರೊಂದಿಗೆ ಬೆಳಿಗ್ಗೆ ಹೊಲಕ್ಕೆ ಕಬ್ಬಿನ ನಾಟಿ ಮಾಡಲು ಹೋದಾಗ,ಕಬ್ಬಿನ ನಾಟಿ ತುಂಡು ಮುಗಿದು ಅವುಗಳನ್ನು ತರಲು ಪಕ್ಕದ ಹೊಲಕ್ಕೆ ಚಕ್ಕಡಿ ಕಟ್ಟಿಕೊಂಡು ಹೋಗುವಾಗ ಬದುವಿನ ಮೇಲಿದ್ದ,ಮಂಗಗಳು ಚೀರಾಡುತ್ತಾ ಜಿಗಿದಾಡುತ್ತಾ ಚಕ್ಕಡಿ ಮುಂದಿನಿಂದ ಹೋಗಿದ್ದರಿಂದ,ಎತ್ತುಗಳು ಬೆದರಿ ಚಿಲ್ಲಾಪಿಲ್ಲಿಯಾದ ಪರಿಣಾಮ ಚಕ್ಕಡಿ ಪಲ್ಟಿಯಾಗಿ ಬಿದ್ದು,ಎದೆಗೆ ಪೆಟ್ಡು ಆಗಿ,ಚಿಕಿತ್ಸೆಗೆ
ಸರಕಾರಿ ಆಸ್ಪತ್ರೆಗೆ ಸಾಗಿಸುವಾಗ ರೈತ ಸಾವನ್ನಪ್ಪಿದ್ದಾನೆ.
ಪತ್ನಿ ಸವಿತಾ ಪೊಲೀಸ್ ಠಾಣೆಗೆ ದೂರು ನೀಡಿದ್ದು,ಪ್ರಕರಣ ದಾಖಲಾಗಿದೆ.
Kshetra Samachara
03/01/2021 08:15 pm