ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಟೋ ಚಾಲಕನ ಆರೋಗ್ಯದಲ್ಲಿ ಏರುಪೇರು! ಮನೆ ಗೋಡಗೆ ಗುದ್ದಿ ಗಂಭೀರ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿ- ಆಟೋಚಾಲನೆ ಮಾಡುವಾಗ ಆಟೋ ಚಾಲಕನಿಗೆ ಪಾರ್ಶ್ವವಾಯು ಸಂಭವಿಸಿದ ಪರಿಣಾಮವಾಗಿ, ಆಟೋ ಮನೆಯ ಗೋಡೆಗೆ ಡಿಕ್ಕಿ ಹೊಡೆದು ಆಟೋ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಆನಂದ ನಗರ ಬಳಿ ನಡೆದಿದೆ..

ಶಂಭುಲಿಂಗ ಜಡಿ ಎಂಬ ಆಟೋ ಚಾಲಕ, ಆಟೋ ಚಾಲನೆ ಮಾಡುವಾಗ ಪಾರ್ಶ್ವವಾಯು ಸಂಭವಿಸಿದೆ.

ಆಗ ಆಟೋ ನಿಯಂತ್ರಣಕ್ಕೆ ಬಾರದೇ ಮನೆಯ ಗೋಡೆಗೆ ಗುದ್ದಿದ ಪರಿಣಾಮ, ಚಾಲಕನಿಗೆ ಗಂಭೀರ ಗಾಯವಾಗಿದ್ದು, ಕೂಡಲೆ ಅವರನ್ನು ಹುಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಕುತ್ತಿಗೆಗೆ ಗಂಭೀರವಾದ ಗಾಯವಾಗಿದ್ದು ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಹುಬ್ಬಳ್ಳಿಯ ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

03/01/2021 03:08 pm

Cinque Terre

59.12 K

Cinque Terre

0

ಸಂಬಂಧಿತ ಸುದ್ದಿ