ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಎರಡು ವರಷಗಳಿಂದ ವಿಪರೀತ ಮಳೆಯಾಗಿ‌ ಬೆಳೆ ಸರಿಯಾಗಿ ಆಗಲಿಲ್ಲ ಎಂದು ರೈತ ಆತ್ಮಹತ್ಯೆ

ಕಲಘಟಗಿ:ತಾಲ್ಲೂಕಿನ ರಾಮನಾಳ ಗ್ರಾಮದ ರೈತ ಎರಡು ವರಷಗಳಿಂದ ವಿಪರೀತ ಮಳೆಯಾಗಿ‌ ಬೆಳೆ ಸರಿಯಾಗಿ ಆಗಲಿಲ್ಲ ಎಂದು ಚಿಂತೆಗೀಡಾಗಿ,ಹಳ್ಳದಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಗ್ರಾಮದ ಪಿರೋಜಿ ದೊಡಮನಿ (44) ಎಂಬ ರೈ‌ತನೇ ಆತ್ಕಹತ್ಯೆಗೀಡಾಗಿದ್ದಾನೆ.

ಮೃತ ರೈತ ಹೊಲ ಖರೀದಿ ಮಾಡಲು ಬೇರೆಯವರಿಂದ ಕೈಗಡ ಸಾಲವನ್ನು ಮಾಡಿದ್ದು, ಕಳೆದ ಎರಡು ವರ್ಷಗಳಿಂದ ವಿಪರೀತ ಮಳೆಯಿಂದಾಗ ಬೆಳೆ ಸರಿಯಾಗಿ ಆಗದೇ, ಸಾಲವನ್ನು ತೀರಿಸುವುದು ಹೇಗೆ ಎಂದು ಚಿಂತೆಯನ್ನು ಮಾಡುತ್ತಿದ್ದು,ಬೇಡ್ತಿ ಹಳ್ಳದ ಬ್ರಿಜ್ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಮೃತ ರೈತನ ಮಗ ವಿಠಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸ್ ರು ತನಿಖೆ ಕೈಗೊಂಡಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

28/09/2020 01:13 pm

Cinque Terre

9.8 K

Cinque Terre

0

ಸಂಬಂಧಿತ ಸುದ್ದಿ