ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ : ಕೆಲಸಕ್ಕೆ ಹೋದವರು ಮಸಣ ಸೇರಿದ್ರು : ಸವದತ್ತಿ ರಸ್ತೆಯಲ್ಲಿ ಭೀಕರ ಅಪಘಾತ ನಾಲ್ವರ ಸಾವು

ಧಾರವಾಡ: ಮಿನಿ ಗೂಡ್ಸ್ ಹಾಗೂ ಜೀಪ್ ಮಧ್ಯೆ ಭೀಕರ ಅಪಘಾತ ಸಂಭವಿಸಿ ನಾಲ್ಕು ಜನ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಈಗಷ್ಟೆ ನಡೆದಿದೆ.

ಸವದತ್ತಿ ಕಡೆಯಿಂದ ಧಾರವಾಡ ಕಡೆಗೆ ಬರುತ್ತಿದ್ದ ಜೀಪು ಮಿನಿ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಗೂಡ್ಸ್ ವಾಹನದಲ್ಲಿದ್ದ ನಾಲ್ಕು ಜನ ಸಾವನ್ನಪ್ಪಿದ್ದಾರೆ. ಸವದತ್ತಿ ದಾಟಿ 4 ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ.

ಜೀಪು ಮೊದಲು ಟೆಂಪೊ ಒಂದಕ್ಕೆ ಡಿಕ್ಕಿ ಹೊಡೆದು ನಂತರ ಮಿನಿ ಗೂಡ್ಸ್ ಗೆ ಡಿಕ್ಕಿ ಹೊಡೆದಿದೆ. ಕೆಲಸಕ್ಕೆಂದು ಬಂದಿದ್ದ ಕಾರ್ಮಿಕರು ಕೆಲಸ ಮುಗಿಸಿ ಮರಳಿ ಗೂಡ್ಸ್ ವಾಹನದ ಮೂಲಕ ರಾಮದುರ್ಗದ ಕಡೆಗೆ ಹೊರಟಿದ್ದರು.

ಮೃತಪಟ್ಟವರ ಹೆಸರು ಹಾಗೂ ವಿಳಾಸ ತಿಳಿದು ಬಂದಿಲ್ಲ.

Edited By : Nirmala Aralikatti
Kshetra Samachara

Kshetra Samachara

02/10/2020 09:55 pm

Cinque Terre

68.58 K

Cinque Terre

4

ಸಂಬಂಧಿತ ಸುದ್ದಿ