ಕಲಘಟಗಿ:ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಗಟಾರದಲ್ಲಿ ಕೊಳೆತ ಸ್ಥಿತಿಯಲ್ಲಿ ಅನಾಮಧೇಯ ಶವ ಶುಕ್ರವಾರ ಸಂಜೆ ಪತ್ತೆಯಾಗಿದ್ದು ಪಟ್ಟಣದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಪಟ್ಟಣದ ಹನುಮಾನ ದೇವಸ್ಥಾನದ ಹತ್ತಿರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಗಟಾರದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು,ದುರ್ವಾಸನೆ ಬರುವ ಕಾರಣ ಜನರು ನೋಡಿದಾಗ ಶವ ಪತ್ತೆಯಾಗಿದೆ.ಅನುಮಾನಾಸ್ಥದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು,ಹಲವು ಸಂಶಯಗಳಿಗೆ ಎಡೆಮಾಡಿದೆ.ಸ್ಥಳಕ್ಕೆ ಸಿಪಿಐ ವಿಜಯ ಬಿರಾದಾರ ಭೇಟಿ ನೀಡದ್ದಾರೆ.
Kshetra Samachara
06/11/2020 08:29 pm