ಹುಬ್ಬಳ್ಳಿ:ಹರಿಯಾಣದಿಂದ ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶಕ್ಕೆ ಹೊರಟಿದ್ದ ಸರಕು ತುಂಬಿದ್ದ ಲಾರಿಯೊಂದು ಬೆಳಗಿನ ಜಾವ ಕಿತ್ತೂರು ಚೆನ್ನಮ್ಮ ವೃತ್ತದಲ್ಲೇ ಪಲ್ಟಿಯಾದ ಘಟನೆ ನಡೆದಿದೆ.
ಹರಿಯಾಣದಿಂದ ಬೆಳ್ಳುಳ್ಳಿ ಹಾಗೂ ಹಲ್ಲುಜ್ಜುವ ಪೇಸ್ಟನ್ನ ತೆಗೆದುಕೊಂಡು ಬಂದಿದ್ದ ಲಾರಿಯು ಚಾಲಕನ ಅಜಾಗೂರಕತೆಯಿಂದ ಪಲ್ಟಿಯಾಗಿದೆ. ಚಾಲಕ ಸಾಹುಲ ಖಾನ ಹಾಗೂ ಕ್ಲೀನರ್ ಮೊಹ್ಮದ ಸಯೀಫ ತಕ್ಷಣವೇ ಲಾರಿಯಿಂದ ಜಿಗಿದು ಜೀವ ಉಳಿಸಿಕೊಂಡಿದ್ದಾರೆ.
ಚೆನ್ನಮ್ಮ ವೃತ್ತದಲ್ಲೇ ಘಟನೆ ನಡೆದಿದ್ದರಿಂದ ಬಿದ್ದ ಲಾರಿಯನ್ನ ಮೇಲೆತ್ತಲು ಹರಸಾಹಸ ನಡೆದಿದೆ. ಎರಡು ಹಿಟ್ಯಾಚಿಗಳನ್ನ ತೆಗೆದುಕೊಂಡು ಬಂದು ಮೇಲೆತ್ತಲಾಯಿತು. ಇದರಿಂದಾಗಿ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
10 ಗಾಲಿಯ ಈ ಲಾರಿಯು ಚೆನ್ನಮ್ಮ ವೃತ್ತದಲ್ಲಿ ಬೀಳಲು ಚಾಲಕ ರಾಂಗ್ ರೂಟಲ್ಲಿ ಬಂದಿದ್ದಾನೆ ಎನ್ನಲಾಗಿದೆ. ಈ ಕುರಿತು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿಯನ್ನು ಮೇಲೆತ್ತಲು ಪೊಲೀಸರು ಶತಪ್ರಯತ್ನ ನಡೆಸಿದರು.
Kshetra Samachara
06/11/2020 09:54 am