ಹುಬ್ಬಳ್ಳಿ: ಕಲಬುರಗಿ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಾಗೂ ರಾಜ್ಯ ರೈತ ಮತ್ತು ಕಾರ್ಮಿಕರ ಪರ ಅನೇಕ ಹೋರಾಟ ಮಾಡಿದ್ದ ಮಾರುತಿ ಮಾನ್ಪಡೆ ತೀವ್ರ ಅನಾರೋಗ್ಯದ ಕಾರಣ ಇಂದು ವಿಧಿವಶರಾಗಿದ್ದಾರೆ.
ಕಲ್ಯಾಣ ಕರ್ನಾಟಕದ ಹಿರಿಯ ಜನಪರ ಹೋರಾಟಗಾರ ಮಾರುತಿ ಮಾನ್ಪಡೆ ನಿಧನರಾಗಿದ್ದಾರೆ. ಪ್ರಾಂತ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾಗಿದ್ದ ಮಾರುತಿ ಮಾನ್ಪಡೆ ಕೊರೊನಾ ಸೋಂಕಿನಿಂದಲೂ ಬಳಲುತ್ತಿದ್ದರು.
ಅಲ್ಲದೇ ಮೊದಲನೇ ದಿನ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬಳಿಕ ಮಹಾರಾಷ್ಟ್ರದ ಸೋಲಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ರಿಪೋರ್ಟ್ ನೆಗೆಟಿವ್ ಬಂದಿದ್ದರೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
Kshetra Samachara
20/10/2020 04:39 pm