ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಡೆಬಳ್ಳಿಯೆಂಬ ಹಿತ್ತಲಗಿಡದಲ್ಲಿ ಕ್ಯಾನ್ಸರ್ ಶಮನಕಾರಿ ಅಂಶ ಪತ್ತೆ: ಮಂಗಳೂರು ವಿವಿಗೆ ಮೊದಲ ಪೇಟೆಂಟ್

ಮಂಗಳೂರು: ಕರಾವಳಿಯಲ್ಲಿ ಹಿತ್ತಲಗಿಡವಾಗಿ ಯಾರಿಗೂ ಬೇಡವಾಗಿದ್ದ ಹಡೆಬಳ್ಳಿಯನ್ನು ಶುದ್ಧೀಕರಣ ಮಾಡಿದ್ದ ಮಂಗಳೂರು ವಿವಿಯ ವಿಜ್ಞಾನಿಗಳು ಅದರಲ್ಲಿ ಕ್ಯಾನ್ಸರ್​​​ ಶಮನಕಾರಿ ಅಂಶವಿದೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಹಡೇಬಳ್ಳಿಯ ಶುದ್ಧೀಕರಣಕ್ಕೆ ಭಾರತ ಸರ್ಕಾರದ ಪೇಟೆಂಟ್ ದೊರಕಿದೆ. ಇದು ಮಂಗಳೂರು ವಿವಿಗೆ ದೊರಕಿರುವ ಮೊದಲ ಪೇಟೆಂಟ್ ಆಗಿದೆ.

ಮಂಗಳೂರು ವಿವಿಯ ಸಸ್ಯಶಾಸ್ತ್ರ ವಿಭಾಗದ ಸಂಶೋಧಕರಾಗಿದ್ದ ಪ್ರೊ.ಕೆ.ಆರ್.ಚಂದ್ರಶೇಖರ್ ಮತ್ತು ಪ್ರೊ.ಭಾಗ್ಯ ನೆಕ್ರಕಲಾಯ 2014-15ರಲ್ಲಿ ಮೊದಲ ಬಾರಿಗೆ ಟೆಂಟ್ರಾಡ್ರೈನ್ ಬಗ್ಗೆ ಸಂಶೋಧನೆ ಕೈಗೊಂಡಿದ್ದಾರು. ಆಗ ಅವರಿಗೆ ಕರಾವಳಿಯಲ್ಲಿ ದಿರಕುವ ಹಡೆಬಳ್ಳಿಯಲ್ಲಿ ಟೆಂಟ್ರಾಡ್ರೈನ್ ಅಂಶ ಇರುವುದನ್ನು ಗೊತ್ತು ಮಾಡಿದ್ದಾರೆ. ಅಲ್ಲದೇ, ಈ ಬಳ್ಳಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಇದು ಕ್ಯಾನ್ಸರ್ ಶಮನಕಾರಿ ಎಂಬ ಮಹತ್ವದ ಅಂಶ ಬೆಳಕಿಗೆ ಬಂದಿದೆ.2017ರಲ್ಲಿ ಇದನ್ನು ಪೇಟೆಂಟ್​​​ಗೆ ಸಲ್ಲಿಸಲಾಗಿದ್ದು, ಇದೀಗ 20 ವರ್ಷಗಳ ಅವಧಿಗೆ ಪೇಟೆಂಟ್ ಪ್ರಮಾಣ ಲಭಿಸಿದೆ. ಇದು ಮಂಗಳೂರು ವಿವಿಗೆ ದೊರೆತ ಮೊದಲ ಪೇಟೆಂಟ್ ಕೂಡಾ ಆಗಿದೆ. ಈ ಪ್ರಯೋಗದ ಮೂಲಕ ಸುಲಭವಾಗಿ ಬೇರೆ ಕಾಂಪ್ಲೆಕ್ಸ್ ಮಿಕ್ಸ್​​​ಚರ್​​ನಿಂದ ಬೇರ್ಪಡಿಸಲು ಸಾಧ್ಯವೇ ಎಂದು ವಿವಿ ಪ್ರಯೋಗಾಲಯದಲ್ಲಿಯೇ ಶುದ್ಧೀಕರಣ (ಪ್ಯೂರಿಟಿ) ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ಶೇ.98 ಶುದ್ಧೀಕರಣ ಬರುತ್ತದೆ ಎಂದು ಸಾಬೀತಾಗಿದೆ.

ಈ ಹಿಂದೆ ಚೀನಾದಲ್ಲೂ ಈ ರೀತಿಯ ಬಳ್ಳಿಯ ಸಂಶೋಧನೆಯನ್ನು ಅಲ್ಲಿನ ವಿಜ್ಞಾನಿಗಳು ಮಾಡಿದ್ದರು. ಅಲ್ಲಿನ ಬಳ್ಳಿಯಲ್ಲೂ ಟೆಂಟ್ರಾಡ್ರೈನ್ ಅಂಶವನ್ನು ಪತ್ತೆ ಮಾಡಿದ್ದರು. ಇದಾದ ಬಳಿಕ ಭಾರತದಲ್ಲಿ ಮೊದಲ ಬಾರಿಗೆ ಮಂಗಳೂರಿನ ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರೆ.

Edited By : Nagesh Gaonkar
PublicNext

PublicNext

28/09/2021 09:52 pm

Cinque Terre

184.39 K

Cinque Terre

1