ಗಾಂಧಿನಗರ: ನಟ ಸಂಚಾರಿ ವಿಜಯ್ ಅಭಿನಯದ ಕನ್ನಡದ 'ನಾನು ಅವನಲ್ಲ ಅವಳು' ಸಿನಿಮಾ ರೀತಿಯಲ್ಲಿ ಗುಜರಾತ್‌ನ ವೈದ್ಯರೊಬ್ಬರು ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಭವಿಷ್ಯದಲ್ಲಿ ಮಗುವನ್ನು ಪಡೆಯಲು ವೀರ್ಯ ಸಂಗ್ರಹಿಸಿಟ್ಟಿದ್ದಾರೆ.
ಹೌದು. ಗುಜರಾತ್‌ನ ಮೊದಲ ಟ್ರಾನ್ಸ್ ವೈದ್ಯ ಡಾ.ಜೆಸ್ನೂರ್ ದಯಾರಾ ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಮುನ್ನ ನಾಲ್ಕು ಬಾಟಲ್‌ಗಳ ವೀರ್ಯವನ್ನು ಕ್ರಯೋಪ್ರೆಸರ್ವ್ (ಫ್ರೀಜ್) ಮಾಡಿದ್ದಾರೆ. ಅವರು ತಮ್ಮ ವೀರ್ಯವನ್ನು ಡಾ.ಡಾ.ನಯನಾ ಪಟೇಲ್ ಆಸ್ಪತ್ರೆಯಲ್ಲಿ ಸಂರಕ್ಷಿಸಿದ್ದರು. ಇದರಿಂದ ಅವಳು ಭವಿಷ್ಯದಲ್ಲಿ ಮಗುವನ್ನು ಪಡೆಯಲು ಮುಂದಾಗಿದ್ದಾರೆ.
25 ವರ್ಷ ವಯಸ್ಸಿನ ಡಾ. ದಯಾರಾ ಇತ್ತೀಚೆಗೆ ರಷ್ಯಾದ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಅವರು ಪಂಚಮಹಲ್‌ನ ಸಣ್ಣ ಪಟ್ಟಣವಾದ ಗೋಧ್ರಾದಲ್ಲಿ ಜನಿಸಿದ್ದರು. ಆದರೆ ಅವರಲ್ಲಿ ಹೆಣ್ಣಿನ ಹೋಲಿಕೆ, ಗುಣಗಳು ಗೋಚರಿಸಲು ಆರಂಭಿಸಿದ್ದವು. ಅಧ್ಯಯನಕ್ಕಾಗಿ ರಷ್ಯಾಗೆ ತೆರಳಿದ ಅವರು ವೈದ್ಯಕೀಯ ಪದವಿ ಪಡೆದು ಭಾರತಕ್ಕೆ ವಾಪಸ್ ಆದರು. ಬಳಿಕ ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸೆಗೆ ನಿರ್ಧರಿಸಿದ್ದರು. ಆದರೆ ಶಸ್ತ್ರ ಚಿಕಿತ್ಸೆ ಬಳಿಕ ಮಗುವನ್ನು ಪಡೆಯಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರು. ಇದರಿಂದಾಗಿ ಡಾ.ಜೆಸ್ನೂರ್ ದಯಾರಾ ವೀರ್ಯವನ್ನು ಸಂಗ್ರಹಿಸಿಟ್ಟಿದ್ದಾರೆ.
PublicNext
16/02/2021 09:35 pm