ಮಧುರೈ: ಕಾಲ ಬದಲಾದಂತೆ ಎಲ್ಲವೂ ಸ್ಮಾರ್ಟ್ ಆಗುತ್ತಿದೆ ಇತ್ತೀಚೆಗೆ ಡಿಜಟಲೀಕರಣದ ಕಾಲಘಟದಲ್ಲಿ ಎಲ್ಲರೂ ಸ್ಮಾರ್ಟ್ ಆಗಿ ವಿಚಾರಿಸುವುದನ್ನು ಕಲೆತ್ತಿದ್ದಾರೆ.
ಇದಕ್ಕೆ ಹಸಿ ಉದಾಹರಣೆ ಅಂದ್ರೆ ಇಲ್ಲೊಂದು ಮದುವೆ ಕಾರ್ಡ್ ನಲ್ಲಿ ಗೂಗಲ್ ಪೇ, ಫೋನ್ ಪೇ ಕ್ಯೂಆರ್ ಕೋಡ್ ಅಳವಡಿಸಲಾಗಿದೆ.
ಹೌದು ಕೊರೊನಾ ಬಂದಾಗಿನಿಂದ ಮದುವೆಯ ವ್ಯಾಖ್ಯಾನವೇ ಬದಲಾಗಿಬಿಟ್ಟಿದೆ. ಸಾವಿರಾರು ಜನರು ಸಮ್ಮುಖದಲ್ಲಿ ನಡೆಯಬೇಕಿದ್ದ ಮದುವೆಗಳು ಸೀಮಿತ ವ್ಯಕ್ತಿಗಳ ಮಧ್ಯೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.
ಆದ್ರೆ ಕೊರೊನಾ ಪೂರ್ವದಲ್ಲಿ ಎಲ್ಲರಿಗೂ ಉತ್ತಮ ಉಡುಗೊರೆ ನೀಡಿದವರು ಈಗಾ ಬರಿಗೈಯಲ್ಲಿ ಮದುವೆ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಮತ್ತೊಂದೆಡೆ ಮದುವೆಯಿಂದ ನುನುಚಿಕೊಳ್ಳುವವರಿಗೂ ಈ ಕೊರೊನಾ ಸೂಕ್ತ ನೆಪವಾಗಿದೆ.
ಹಾಗೆಯೇ ಸಂಬಂಧಿಗಳಿಂದ ಉಡುಗೊರೆ ಸ್ವೀಕರಿಸಲೂ ಹಿಂದೆ ಮುಂದೆ ನೋಡುವಂತಹ ಸ್ಥಿತಿ ಬಂದಿದೆ. ಹಾಗಾಗಿ ಉಡುಗೊರೆ ಕೊಡಲು ಬಯಸುವವರಿಗೆ ಲಗ್ನ ಪತ್ರಿಕೆಯಲ್ಲೇ ಗೂಗಲ್ ಪೇ, ಫೋನ್ ಪೇ ಮಾಡುವುದಕ್ಕೆ ಅನುಕೂಲ ಮಾಡಿಕೊಡಲಾಗಿದೆ.
ತಮಿಳುನಾಡಿನ ಮಧುರೈನ ಒಂದು ಜೋಡಿ ಈ ಉಪಾಯವನ್ನು ಕಾರ್ಯ ರೂಪಕ್ಕೆ ತಂದಿದೆ. ಮದುವೆಯ ಆಮಂತ್ರಣ ಪತ್ರದಲ್ಲಿಯೇ ನೀವು ಯಾವ ಖಾತೆಗೆ ಉಡುಗೊರೆ ಹಣವನ್ನು ಹಾಕಬಹುದು ಎನ್ನುವ ಮಾಹಿತಿ ನೀಡಲಾಗಿತ್ತು. ಫೋನ್ ಪೇ ಮತ್ತು ಗೂಗಲ್ ಪೇ ಎರಡರ ಕ್ಯೂ ಆರ್ ಕೋಡ್ ನ್ನು ಮುದ್ರಿಸಲಾಗಿತ್ತು. ಇದರಿಂದಾಗಿ ಮದುವೆಗೆ ಬಾರದವರೂ ಉಡುಗೊರೆಯನ್ನು ಸುಲಭವಾಗಿ ಕೊಡಬಹುದಾಗಿತ್ತು. ಹಾಗೆಯೇ ಮದುವೆಗೆ ಬಂದು, ಉಡುಗೊರೆ ಕೊಡಲು ಕವರ್ ಇಲ್ಲ, ಹೆಸರು ಬರೆಯಲು ಪೆನ್ ಇಲ್ಲ ಎಂದು ಹುಡುಕಾಡುವ ಬದಲು, ಸುಲಭವಾಗಿ ಕ್ಯೂ ಆರ್ ಕೋಡ್ ಬಳಸಿ ಉಡುಗೊರೆ ನೀಡಲು ಅವಕಾಶ ಮಾಡಿಕೊಡಲಾಗಿತ್ತು.
PublicNext
18/01/2021 07:40 pm