ಬೆಂಗಳೂರು: ಕಳೆದ 20 ದಿನದಿಂದ ರಾತ್ರಿ ವೇಳೆ ಅತಿಯಾದ ಚಳಿ, ಬೆಳಗ್ಗೆ ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗ್ತಿದೆ. ಇದಕ್ಕೆಲ್ಲಾ ಕಾರಣ ಮಹಾರಾಷ್ಟ್ರದಲ್ಲಿ ಬೀಸುತ್ತಿರುವ ಗಾಳಿಯ ಪ್ರಭಾವ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸಿಲಿಕಾನ್ ಸಿಟಿಯಲ್ಲಿ ಕಳೆದ ಎರಡು ದಿನಗಳಿಂದ ಕ್ಲೈಮೆಟ್ ಚೇಂಜ್ ಆಗಿದೆ.
ಬೆಂಗಳೂರು ಸೇರಿದಂತೆ ಬೀದರ್, ಕಲಬುರ್ಗಿ, ರಾಯಚೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲೂ 10 ಡಿಗ್ರಿ ಕನಿಷ್ಟ ತಾಪಮಾನ ದಾಖಲಾಗುವ ಸಾಧ್ಯತೆಯಿದೆ ಎಂದಿದ್ದಾರೆ ಹವಾಮಾನ ಇಲಾಖೆ ಅಧಿಕಾರಿಗಳು.
ಅಂದಹಾಗೆ ಕಳೆದ ವರ್ಷ ಹೇಳಿಕೊಳ್ಳುವಷ್ಟು ಚಳಿ ಇರಲಿಲ್ಲ. ಆದರೆ ಈ ಬಾರಿ ಲ್ಯಾಬಿನೋ ಕಂಡೀಷನ್ ನಿಂದಾಗಿ ಅತಿ ಹೆಚ್ಚಿನ ಚಳಿಯಾಗುತ್ತಿದೆ.
ಫೆಸಿಫಿಕ್ ಮಹಾಸಾಗರ ಮೇಲ್ಮೈ ನೀರು ತಂಪಾಗುವಿಕೆ ಚಳಿಗೆ ಪ್ರಮುಖ ಕಾರಣವಾಗಿದೆ.
ಉತ್ತರ ಹಾಗೂ ಈಶಾನ್ಯದಿಂದ ಬರುವ ಒಣಹವೆಯಿಂದಾಗಿ ಚಳಿ ಪ್ರಮಾಣ ಹೆಚ್ಚಾಗ್ತಿದೆ. ಸಂಕ್ರಾಂತಿ ಮುಗಿಯುವವರೆಗೂ ಹೆಚ್ಚಿನ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹೆಚ್ಚುತ್ತಿರುವ ಚಳಿಯಿಂದಾಗಿ ಮಕ್ಕಳು, ಬಾಣಂತಿಯರು, ವೃದ್ಧರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕೇರ್ ತಗೋಬೇಕು.
ಸಾಧ್ಯವಾದಷ್ಟು ಚಳಿಯಿಂದ ರಕ್ಷಣೆ ಪಡೆಯಿರಿ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದಿದ್ದಾರೆ ವೈದ್ಯರು.
ಈ ಬಾರಿ ಹೆಚ್ಚು ಚಳಿ ಇದೆ. ಚಳಿ ಮಧ್ಯೆ ರೂಪಾಂತರಿ ಕೊರೊನಾದ ಆರ್ಭಟ ಹೀಗಾಗಿ ಆದಷ್ಟು ಎಚ್ಚರಿಕೆಯಿಂದ ಇರಿ.
PublicNext
05/01/2021 07:27 am