ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವ್ಯಾಕ್ಸಿನ್ ಕಡ್ಡಾಯವಲ್ಲ, ಒತ್ತಾಯದಿಂದ ಲಸಿಕೆ ನೀಡಲ್ಲ: ಸುಪ್ರೀಂ ಗೆ ಕೇಂದ್ರದ ಮನವರಿಕೆ

ಹೊಸದಿಲ್ಲಿ: ಹೆಮ್ಮಾರಿ ಸೋಂಕಿಗೆ ಮದ್ದಾಗಿರುವ ಕೋವಿಡ್ ಲಸಿಕೆಯನ್ನು ಪಡೆಯುವುದು ಕಡ್ಡಾಗೊಳಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಇಂದು ಕೇಂದ್ರ ಸರ್ಕಾರ ತಿಳಿಸಿದೆ.

“ಕೋವಿಡ್-19 ವ್ಯಾಕ್ಸಿನೇಷನ್ ಪ್ರಸ್ತುತ ನಡೆಯುತ್ತಿರುವ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ದೊಡ್ಡ ಸಾರ್ವಜನಿಕ ಹಿತಾಸಕ್ತಿಯಾಗಿದೆ. ಎಲ್ಲಾ ನಾಗರಿಕರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ವಿವಿಧ ಮಾಧ್ಯಮಗಳ ಮೂಲಕ ಸರಿಯಾಗಿ ಜಾಹೀರಾತು, ಸಲಹೆ ಮತ್ತು ಸಂವಹನ ನಡೆಸಲಾಗಿದೆ” ಎಂದು ಕೇಂದ್ರ ಹೇಳಿದೆ.

ಆದರೆ ಯಾವುದೇ ವ್ಯಕ್ತಿಗೆ ಒತ್ತಾಯಪೂರ್ವಕವಾಗಿ ಕೋವಿಡ್ ಲಸಿಕೆ ಹಾಕಲಾಗುತ್ತಿಲ್ಲ. ಲಸಿಕೆ ಪಡೆಯುತ್ತಿರುವ ವ್ಯಕ್ತಿಯ ಪೂರ್ವಾನುಮತಿಯಿಲ್ಲದೆ ಲಸಿಕೆ ನೀಡುತ್ತಿಲ್ಲ ಎಂದು ಕೇಂದ್ರ ಸ್ಪಷ್ಟ ಪಡಿಸಿದೆ. ವಿಕಲಾಂಗ ವ್ಯಕ್ತಿಗಳಿಗೆ ಮನೆ ಮನೆಗೆ ತೆರಳಿ ಕೋವಿಡ್-19 ಲಸಿಕೆ ನೀಡುವ ಬಗ್ಗೆ ಎನ್ ಜಿಒ ಎವಾರಾ ಫೌಂಡೇಶನ್ ನ ಅರ್ಜಿಗೆ ಪ್ರತಿಕ್ರಿಯೆಯಾಗಿ ಸಲ್ಲಿಸಿದ ಅಫಿಡವಿಟ್ ನಲ್ಲಿ ಕೇಂದ್ರವು ಈ ಮಾಹಿತಿ ನೀಡಿದೆ.

Edited By : Nirmala Aralikatti
PublicNext

PublicNext

17/01/2022 01:01 pm

Cinque Terre

57.69 K

Cinque Terre

3

ಸಂಬಂಧಿತ ಸುದ್ದಿ