ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಿಳೆ ಸಮ್ಮತಿಯೊಂದಿಗೆ HIV ಸೋಂಕಿತ ನಡೆಸುವ ಸಂಭೋಗ ‘ಕೊಲೆ ಯತ್ನವಲ್ಲ’ : ಹೈಕೋರ್ಟ್

ಹೊಸದಿಲ್ಲಿ: ಎಚ್ ಐವಿ ಪಾಸಿವಿಟ್ ವ್ಯಕ್ತಿಯೊಬ್ಬ ಮಹಿಳೆಯ ಸಮ್ಮತಿಯೊಂದಿಗೆ ಲೈಂಗಿಕ ಕ್ರಿಯೆ(ಸಂಭೋಗ) ನಡೆಸಿದರೆ, ಅದನ್ನು “ಕೊಲೆ ಯತ್ನ’ ಎಂದು ಪರಿಗಣಿಸಲಾಗದು ಎಂದು ದಿಲ್ಲಿ ಹೈಕೋರ್ಟ್ ಹೇಳಿದೆ.

ಮಲಮಗಳನ್ನೇ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಏಡ್ಸ್ ಪೀಡಿತ ವ್ಯಕ್ತಿಯೊಬ್ಬನನ್ನು ಸೆಕ್ಷನ್ 307 (ಕೊಲೆ ಯತ್ನ)ರ ಅನ್ವಯ ಅಪರಾಧಿ ಎಂದು ಘೋಷಿಸಿ ನೀಡಿದ ತೀರ್ಪನ್ನು ನ್ಯಾಯಾಲಯ ವಜಾ ಮಾಡಿದೆ.

ಯಾವುದೇ ಮಹಿಳೆಯ ಒಪ್ಪಿಗೆ ಇದ್ದು, ಆಕೆಯೊಂದಿಗೆ ಎಚ್ಐವಿ ಪೀಡಿತ ವ್ಯಕ್ತಿ ಸಂಭೋಗ ನಡೆಸಿದರೆ ಆತ “ಕೊಲೆ ಯತ್ನ’ (ತನ್ನ ಸೋಂಕನ್ನು ಆಕೆಗೆ ಹರಡಿ ಆಕೆಯ ಸಾವಿಗೆ ಕಾರಣವಾಗುವ ಕೃತ್ಯ) ನಡೆಸಿದ್ದಾನೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾ| ವಿಭು ಬಖ್ರು ನೇತೃತ್ವದ ನ್ಯಾಯಪೀಠ ಹೇಳಿದೆ.

ಆದರೆ, ಈ ಪ್ರಕರಣದಲ್ಲಿ ವ್ಯಕ್ತಿಯು ತಮ್ಮ ಮಲಮಗಳ ಮೇಲೆಯೇ ಅತ್ಯಾಚಾರ ಮಾಡಿರುವ ಕಾರಣ, ಆತನನ್ನು ಸೆಕ್ಷನ್ 376(ಅತ್ಯಾಚಾರ)ರಡಿ ಅಪರಾಧಿ ಎಂದು ಘೋಷಿಸಿ, ನ್ಯಾಯಪೀಠ ಶಿಕ್ಷೆಯನ್ನು ಎತ್ತಿಹಿಡಿದಿದೆ.

“ಒಂದು ವೇಳೆ ಪಾಸಿಟಿವ್ ವ್ಯಕ್ತಿ ತನ್ನ ಸ್ಥಿತಿಯ ಅರಿವಿದ್ದೂ, ಅಸುರಕ್ಷಿತ ಲೈಂಗಿಕತೆಗೆ ಮುಂದಾದರೆ ಸೆಕ್ಷನ್ 270ರ ಅಡಿಯಲ್ಲಿ ಸೋಂಕನ್ನು ಉದ್ದೇಶಪೂರ್ವಕವಾಗಿ ಹರಡಲೆತ್ನಿಸಿದ ಆರೋಪ ದಡಿಯಲ್ಲಿ ಆತನನ್ನು ಶಿಕ್ಷೆಗೆ ಗುರಿಪಡಿಸಬಹುದು’ ಎಂದು ಈ ಪ್ರಕರಣದ ವಿಚಾರಣೆ ವೇಳೆ ಕೋರ್ಟ್ ಅಭಿಪ್ರಾಯಪಟ್ಟಿದೆ.

Edited By : Nirmala Aralikatti
PublicNext

PublicNext

30/11/2020 09:02 am

Cinque Terre

86.48 K

Cinque Terre

0