ಕೊಲ್ಹಾಪುರ : ಡಾಕ್ಟರ್ ಮುಂದೆ ಕುಳಿತಿದ್ದ ರೋಗಿಯೊಬ್ಬರಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿದೆ. ಸಕಾಲದಲ್ಲಿ ಡಾಕ್ಟರ್ ಚಿಕಿತ್ಸೆ ನೀಡುವ ಮೂಲಕ ರೋಗಿಯ ಜೀವ ಉಳಿಸಿದ್ದಾರೆ. ಇದಕ್ಕೆ ಹೇಳುವುದು ವೈದ್ಯೋ ನಾರಾಯಣ ಹರಿ ಎಂದು.ಹೌದು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿರುವ ಈ ಘಟನೆಯ ವಿಡಿಯೋವನ್ನು ರಾಜ್ಯಸಭಾ ಸಂಸದ ಧನಂಜಯ್ ಮಹಾದಿಕ್ ಸೇರಿದಂತೆ ಹಲವು ಟ್ವೀಟಿಗರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಡಾಕ್ಟರ್ ಜೊತೆಗೆ ಸಂವಾದ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಪ್ರಜ್ಞೆ ಕಳೆದುಕೊಂಡು ಕುಸಿದು ಬಿಳುತ್ತಾರೆ. ತಕ್ಷಣ ತನ್ನ ಸೀಟ್ ನಿಂದ ಎದ್ದುಬಂದ ವೈದ್ಯರು ಸಿಪಿಆರ್ ನೀಡುವ ಮೂಲಕ ರೋಗಿಯ ಪ್ರಾಣ ಕಾಪಾಡಿದ್ದಾರೆ. ಕೊಲ್ಹಾಪುರದ ಹೃದಯ ತಜ್ಞ ಡಾ. ಅರ್ಜುನ್ ಅಡ್ನಾಯಕ್ ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.
PublicNext
05/09/2022 10:09 pm