ಹಾವೇರಿ: ಬಂಕಾಪುರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಣ್ಣೀರಿಡುತ್ತಾ ಮಹಿಳಾ ಸಿಬ್ಬಂದಿಯೊಬ್ಬರು ಔಷಧಿ ವಿತರಿಸುತ್ತಿದ್ದಾರೆ.
ಬಂಕಾಪುರ ಹೋಬಳಿಗೆ ಸುಮಾರು 15 ಹಳ್ಳಿಗಳು ಬರುತ್ತವೆ. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರತಿನಿತ್ಯ ನೂರಾರು ರೋಗಿಗಳು ಬರುತ್ತಾರೆ. ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಏನೋ ಸರಿಯಾಗಿ ಸಿಗುತ್ತೆ ಆದರೆ ಸಿಬ್ಬಂದಿಯ ಕೊರತೆಯೋ ಅಥವಾ ಮೇಲಾಧಿಕಾರಿಗಳ ದರ್ಪವೋ ಆಸ್ಪತ್ರೆಯಲ್ಲಿ ಫಾರ್ಮಸಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಯೋರ್ವಳು ತನಗೆ ಹುಷಾರು ಇಲ್ಲದೆ ಹೋದರೂ ಆಸ್ಪತ್ರೆಗೆ ಬಂದು ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು.
ಇನ್ನು ಆಸ್ಪತ್ರೆಗೆ ಬಂದ ಕೆಲವು ಪರಿಚಯಸ್ಥ ರೋಗಿಗಳು ಯಾಕೆ ಮೇಡಂ ಹುಷಾರು ಇಲ್ಲವಾ ಎಂದು ಕೇಳಿದಾಗ ಇಲ್ಲ ಎಂದು ಕಣ್ಣೀರು ಹಾಕುತ್ತಲೇ ಬಂದ ಸಿಬ್ಬಂದಿ ರೋಗಿಗಳಿಗೆ ಔಷಧಿ ವಿತರಣೆಯನ್ನು ಮಾಡುತ್ತಿರುವ ದೃಶ್ಯ ನೋಡುಗರ ಮನ ಕರಗುವಂತಿದೆ.
ಇದನ್ನೇಲ್ಲಾ ನೋಡಿದಾಗ ಇಲ್ಲಿ ಬೇರೆ ಸಿಬ್ಬಂದಿಗಳು ಇಲ್ಲವೋ ಅಥವಾ ಮೇಲಾಧಿಕಾರಿಗಳು ರಜೆ ಕೊಡುವುದಿಲ್ಲವೋ ಎಂಬುವುದು ತಿಳಿಯದಂತಾಗಿದೆ.
ಒಟ್ಟಾರೆ ಬಂಕಾಪುರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಸರಿಯಿಲ್ಲದಿದ್ದರು ಕರ್ತವ್ಯ ನಿರ್ವಹಿಸಬೇಕು ಎನ್ನುವ ರೀತಿ ಸರಿಯಲ್ಲ…
PublicNext
13/06/2022 04:54 pm