ಹಾವೇರಿ: ಈ ಬಡ ದಂಪತಿಗಳಿಗೆ ಮಕ್ಕಳೆಂದರೆ ಪ್ರಂಚಪ್ರಾಣ. ಬಹಳ ವರ್ಷಗಳ ಬಳಿಕ ಹುಟ್ಟಿದ ಮೊದಲು ಮಗು ಹೃದಯ ಸಮಸ್ಯೆಯಿಂದ ಸಾವನ್ನಪ್ಪಿತ್ತು. ಈಗ ಎರಡನೇ ಮಗು ಕೂಡಾ ಮಾರಣಾಂತಿಕ“ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಎಂಬ ಕಾಯಿಲೆ"ಗೆ ತುತ್ತಾಗಿದೆ. ಅದೃಷ್ಟಕ್ಕೆ 16 ಕೋಟಿಯ ಇಂಜೆಕ್ಷನ್ ಕೊಡಲು ಅಮೇರಿಕಾ ವೈದ್ಯ ಸಂಸ್ಥೆ ಮುಂದೆ ಬಂದಿದೆ. ಆದರೆ ಇತರೆ ಚಿಕಿತ್ಸೆಗೆ ಅಂತ 10 ಲಕ್ಷ ಹಣ ಕೊಡಿ ಎಂದು ತಂದೆ ತಾಯಿ ಕರುನಾಡ ಮುಂದೆ ಕಣ್ಣೀರಿಡುತ್ತಿದ್ದಾರೆ..
ಈ ಹಸುಕೂಸಿನ ನರಳಾಟ ನೋಡಿದರೆ ನಮ್ಮ ನಿಮ್ಮ ಕಣ್ಣಾಲೆಗಳು ಒದ್ದೆಯಾಗೋದು ಗ್ಯಾರಂಟಿ. ದಂಪತಿಗಳೊಬ್ಬರಿಗೆ ಮೊದಲು ಹೆಣ್ಣು ಮಗು ಹುಟ್ಟಿತ್ತು, ಆದರೆ ಹೃದಯ ಖಾಯಿಲೆಯಿಂದ ಆ ಮಗು ಧಾರುಣವಾಗಿ ಸಾವನ್ನಪ್ಪಿತ್ತು. ಆದರೆ ದುರಂತ ಎಂದರೆ ಜನಿಸಿದ ಎರಡನೇಯ ಮಗು ಕೂಡಾ ಮಾರಣಾಂತಿಕ ಖಾಯಿಯಲೆಯಿಂದ ನರಳುತ್ತಿದೆ. ಹೌದು ಇಂತಹ ಕಣ್ಣೀರು ತರಿಸುವ ಘಟನೆಯೊಂದು ಹಾವೇರಿಯಲ್ಲಿ ನಡೆದಿದೆ. ಪಾಪ ಹೀಗೆ ಏನೂ ಅರಿಯದ ರೀತಿಯಲ್ಲಿ ಕಣ್ಣು ಬಿಡುತ್ತಿರುವ ಕೂಸುವಿನ ಹೆಸರು ಯಶುವಿಕಾ ಅಂತಾ. ಹುಟ್ಟಿದ ಒಂದು ತಿಂಗಳ ಬಳಿಕೆ ಕೈ ಕಾಲು ಹಾಗೂ ತಲೆಯ ಸ್ವಾಧೀನ ಕಳಡದುಕೊಂಡಿದೆ. ವೈದ್ಯರ ಬಳಿ ತೋರಿಸಿದಾಗಲೆ ತಿಳಿದಿದ್ದು ಈ ಹೆಣ್ಣು ಮಗುವಿಗೆ "ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ"ಎಂಬ ರೋಗವಿದೆ ಅಂತಾ. ನಮ್ಮ ಹಣೆಬರಹವೇ ಸರಿಯಿಲ್ಲಾ ಎಂದು ತಲೆಚಚ್ಚಿಕೊಳ್ಳುತ್ತಿದ್ದ ಅನಿಲರಾಜ್-ಪ್ರತಿಮಾ ಬೆಟಗೇರಿ ಎಂಬುವವರಿಗೆ ವರವಾಗಿ ಬಂದಿದ್ದು,ಅಮೇರಿಕಾ ವೈದ್ಯ ಸಂಸ್ಥೆ.
ಇನ್ನೂ ದೇಶದಲ್ಲಿ ಇಬ್ಬರಿಗೆ ಮಾತ್ರ ಈ ಖಾಯಿಲೆಗೆ ಉಚಿತ ಮೆಡಸಿನ್ ನನ್ನು ಚೀಟಿ ಎತ್ತುವ ಮೂಲಕ ಅಮೇರಿಕಾ ವೈದ್ಯ ಸಂಸ್ಥೆಯು ನೀಡುತ್ತದೆ. ಹಸೂಕೂಸು ಯಶುವಿಕಾ ಗೆ ಅದೃಷ್ಟ ಒಲಿದುಬಂದಿದೆ. ಆದ್ರೆ ಉಳಿದ ಚಿಕಿತ್ಸೆಯ ಖರ್ಚು ಹತ್ತು ಲಕ್ಷ ಬರುತ್ತಿದೆ ಎಂದು ಬೆಂಗಳೂರಿನಲ್ಲಿ ವೈದ್ಯರು ಹೇಳಿದ್ದಾರೆ. ಆದ್ರೆ ಬಡ ಅಂಗಡಿಯಲ್ಲಿ ಕಂಡವರ ಚಪ್ಪಲಿ ಹೊಲೆದು ಜೀವನ ಮಾಡುವಾಗ ಹತ್ತು ಲಕ್ಷ ರೂಪಾಯಿ ಇಲ್ಲದೆ ಪರದಾಡುತ್ತಿದ್ದಾರೆ. ಹೀಗಾಗಿ ಜನರ ಬಳಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.
Canara bank A/c number- 2812101005123
IFSC Code: CNRB0002812
PHONE NUMBER- 9738512553
Anilraj laxman betageri
PublicNext
05/02/2022 11:46 am