ಜರ್ಮನಿ:ಕೋವಿಡ್ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಇಲ್ಲಿಯ 700 ಕುರಿ ಮತ್ತು ಮೇಕೆಗಳು ವಿಶಿಷ್ಟವಾಗಿಯೇ ಕಾಣಿಸಿಕೊಂಡಿವೆ. ಅದು ನಿಜಕ್ಕೂ ವಿಶೇಷವಾಗಿಯೇ ಇದೆ. ಬನ್ನಿ, ಹೇಳ್ತೀವಿ.
ಮಾನವ ಮತ್ತು ಕುರಿ-ಮೇಕೆ ನಡುವೆ ಒಂದು ವಿಶೇಷ ಭಾವನಾತ್ಮಕ ಸಂಬಂಧ ಇದ್ದೇ ಇರುತ್ತದೆ. ಅದನ್ನ ಗಮನದಲ್ಲಿ ಇಟ್ಟುಕೊಂಡೇ ಆಯೋಜಕರು, ಕೋವಿಡ್ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ನೆಲದ ಮೇಲೆ ಸಿರಿಂಜ್ ರೂಪದಲ್ಲಿಯೇ ಚಿತ್ತಾರ ಬಿಡಿಸಿದ್ದರು.
ಆದರೆ,ಇಲ್ಲಿ ಕುರಿ ಮತ್ತು ಮೇಕ್ ತಿನ್ನೋ ಆಹಾರವನ್ನೂ ಹರಡಲಾಗಿತ್ತು. ಅದನ್ನ ಕಂಡ ಕುರಿ ಮತ್ತು ಮೇಕೆಗಳು ಇಲ್ಲಿಗೆ ಬಂದು ಆಹಾರ ತಿಂದಿವೆ. ಆಗಲೇ ಅವುಗಳಿಗೇನೆ ಗೊತ್ತಿಲ್ಲದೇ ಇಲ್ಲೊಂದು ಸಿರಿಂಜ್ ರೂಪ ನೆಲದ ಮೇಲೆ ಮೂಡಿ ಬಿಟ್ಟಿದೆ. ಅದೇ ಈಗ ವಿಶೇಷ ಕೋವಿಡ್ ಅಭಿಯಾನವಾಗಿ ಗಮನ ಸೆಳೆಯುತ್ತಿದೆ.
PublicNext
05/01/2022 10:53 pm