ಬೆಂಗಳೂರು: ರಾಜ್ಯದಲ್ಲಿ ವಯಸ್ಕರ ಕೊರೊನಾ ಲಸಿಕೆ ಮೊದಲ ಡೋಸ್ ವಿತರಣೆಯಲ್ಲಿ ಶೇ.100ರಷ್ಟು ಗುರಿ ಸಾಧನೆಯಾಗಿದೆ. ಈ ಮೂಲಕ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಮೊದಲ ಡೋಸ್ ಪಡೆದುಕೊಂಡಂತಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ. ಕೆ.ಸುಧಾಕರ್, 2022 ಜ.23ರ ಬೆಳಗ್ಗೆ 9ರವರೆಗಿನ ಕೋವಿಡ್ ವಾಕ್ಸಿನ್ ನೀಡಿರುವ ಮಾಹಿತಿಯ ಟೇಬಲ್ ಹಂಚಿಕೊಂಡಿದ್ದಾರೆ. ಜೊತೆಗೆ, ರಾಜ್ಯದಲ್ಲಿ ಶೇ 100 ಮೊದಲ ಡೋಸ್ ಸಾಧಿಸಲು ನಮಗೆ ನಿಖರವಾಗಿ 1 ವರ್ಷ ಮತ್ತು 7 ದಿನಗಳನ್ನು ತೆಗೆದುಕೊಂಡಿತು. ಈ ಸಾಧನೆ ಮಾಡಿದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ (ರಾಜ್ಯದಲ್ಲಿ ವಯಸ್ಕರ ಸಂಖ್ಯೆ 4 ಕೋಟಿಗೂ ಅಧಿಕವಾಗಿದೆ). ಈ ಅದ್ಭುತ ಸಾಧನೆಗಾಗಿ ಎಲ್ಲಾ ಆರೋಗ್ಯ ಕಾರ್ಯಕರ್ತರು ಮತ್ತು ಜಿಲ್ಲಾಡಳಿತಕ್ಕೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.
ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ 4,89,16,000 ಮಂದಿಯನ್ನು ಲಸಿಕೆಗೆ ಅರ್ಹ ಎಂದು ಗುರುತಿಸಲಾಗಿತ್ತು. ಭಾನುವಾರ ಬೆಳಗ್ಗೆ 9ರವರೆಗೆ 4,89,29,819 ಮಂದಿ (ಶೇ.100ರಷ್ಟು) ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. 4,17,27,324 (ಶೇ. 85ರಷ್ಟು) ಮಂದಿ ಎರಡನೇ ಡೋಸ್ ಪೂರ್ಣಗೊಳಿಸಿದ್ದಾರೆ.
PublicNext
23/01/2022 05:46 pm