ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಕುರಿತಾಗಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಿತು. ಈ ವೇಳೆ ಲಾಕ್‌ಡೌನ್, ನೈಟ್ ಕರ್ಫ್ಯೂ ಸಾಧಕ-ಬಾಧಕದ ಬಗ್ಗೆ ಚರ್ಚೆಯಾಗಿದೆ.
ಸಭೆ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ, ಶುಕ್ರವಾರ (ಜ.21ರ)ವರೆಗೂ ಕಾದು ನೋಡಿ ಆ ಬಳಿಕ ವೀಕೆಂಡ್ ಲಾಕ್‌ಡೌನ್ ಸಡಿಲಗೊಳಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಲಾಕ್‌ಡೌನ್ ಇಲ್ಲ. ಜನವರಿ 24 ಅಥವಾ 25ನೇ ತಾರೀಖಿನಿಂದ ಕೋವಿಡ್ ಕೇಸ್ಗಳು ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಹೀಗಾಗಿ ಶುಕ್ರವಾರದ ವರೆಗೂ ಕಾಯ್ದು ಆ ಬಳಿಕ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದರು.
ಇನ್ನು ತಿಂಗಳ ಅಂತ್ಯದವರೆಗೆ ಈ ಮೊದಲಿನ ನಿಯಮಗಳೇ ಯಥಾವತ್ತಾಗಿ ಮುಂದುವರೆಸಲಾಗುವುದು. ಜೊತೆಗೆ ಸದ್ಯಕ್ಕೆ ಲಾಕ್‌ಡೌನ್ ಇಲ್ಲ. ಶುಕ್ರವಾರ ಮತ್ತೊಂದು ಸಭೆಯಿದ್ದು ಅಲ್ಲಿ ಇವರೆಗಿನ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
PublicNext
17/01/2022 05:38 pm