ಬೆಂಗಳೂರು: ನೆರೆ ರಾಜ್ಯಗಳಾದ ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಹೊಸ ಮಾರ್ಗಸೂಚಿ ಹೊರಡಿಸಿದೆ.
ರಾಜ್ಯ ಸರ್ಕಾರವು ಆಗಸ್ಟ್, ಸೆಪ್ಟೆಂಬರ್ ತಿಂಗಳಿನ ಹಬ್ಬ ಹರಿದಿನಗಳು ಬರುವ ಹಿನ್ನೆಲೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆಗಸ್ಟ್ 12ರಿಂದ 20ರವರೆಗೆ ನಿಷೇಧ ಜಾರಿಯಲ್ಲಿರಲಿದ್ದು, ಆಲಂ ಪೀರ್ಗಳನ್ನು ದೂರದಿಂದಲೇ ನೋಡತಕ್ಕದ್ದು ಎಂದಿದೆ. ಸಾರ್ವಜನಿಕವಾಗಿ ಹಬ್ಬ ಆಚರಿಸದಂತೆ ಸರ್ಕಾರ ಮಾರ್ಗಸೂಚಿಯಲ್ಲಿ ಹೇಳಿದೆ.
ಹಬ್ಬಗಳಿಗೆ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಲಾಗಿದೆ. ಮೊಹರಂ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದುರ್ಗಾ ಪೂಜೆಯಲ್ಲಿ ಜನಸಂದಣಿ ತಡೆಟ್ಟಲು ನಿರ್ಬಂಧಗಳನ್ನ ಹೇರಿಕೆ ಮಾಡಲಾಗಿದೆ. ದೇವಸ್ಥಾನ , ಮಸೀದಿ, ಚರ್ಚ್, ಗುರುದ್ವಾರ ಇತರೆ ಧಾರ್ಮಿಕ ಕೇಂದ್ರ ತೆರೆಯಲು ಅನುಮತಿ ನೀಡಲಾಗಿದೆ. ಧಾರ್ಮಿಕ ಕೇಂದ್ರಗಳಲ್ಲಿ ಕೋವಿಡ್ ನಿಮಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶ ಹೊರಡಿಸಲಾಗಿದೆ. ಜಾತ್ರೆ, ದೇವಾಲಯದ ಹಬ್ಬಗಳು, ಮೆರವಣಿಗೆ, ಸಭೆ ಸಮಾರಂಭ ನಿಷೇಧ ಮಾಡಲಾಗಿದೆ. ಇನ್ನು ಮೊಹರಂ ಹಬ್ಬದಲ್ಲಿ ಆಲಂಗಳನ್ನು, ಪಂಜಾಗಳನ್ನು ಸ್ಥಾಪಿಸದಂತೆ ನಿಷೇಧ ಹೇರಲಾಗಿದೆ.
PublicNext
12/08/2021 06:52 pm